ಹದಿಹರೆಯದ ಹುಡುಗರೇ ಇವಳ ಟಾರ್ಗೆಟ್‌ – ಸೆಕ್ಸ್‌ಗಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ ಮಾಯಗಾತಿ ಅರೆಸ್ಟ್‌!

Public TV
2 Min Read

ವಾಷಿಂಗ್ಟನ್‌: ಹದಿಹರೆಯದ ಹುಡುಗರನ್ನೇ ಟಾರ್ಗೆಟ್‌ ಮಾಡಿ, ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಕ್ಕಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ 23 ವರ್ಷದ ಮಹಿಳೆಯನ್ನು (US Woman) ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಬಂಧಿತ ಮಹಿಳೆಯನ್ನು ಅಲಿಸ್ಸಾ ಆನ್ ಜಿಂಗರ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಈಕೆಯ ಮಾಯಾಜಾಲಕ್ಕೆ ಬಲಿಯಾದ ಹುಡುಗರಲ್ಲಿ ನಾಲ್ವರು ಮುಂದೆ ಬಂದು ದೂರು ನೀಡಿದ್ದಾರೆ. ಬಳಿಕ ನ್ಯೂಯಾರ್ಕ್‌ನ ಟ್ಯಾಂಪಾ ಪೊಲೀಸರು (Tampa Police) ಮಹಿಳೆಯನ್ನ ಬಂಧಿಸಿದ್ದಾರೆ. ಈಕೆಯ ಮಾಯಾಜಾಲಕ್ಕೆ ಇನ್ನೂ ಅನೇಕ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಯಗಾತಿ ಸಿಕ್ಕಿಬಿದ್ದದ್ದು ಹೇಗೆ?
ಕಿರಿಯ ವಯಸ್ಸಿನ ಹುಡುಗರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಿದ್ದ ಈಕೆ, ಕಳೆದ ವರ್ಷ ನವೆಂಬರ್‌ನಲ್ಲಿ ಕನಿಷ್ಠ 30 ಬಾರಿ ಒಬ್ಬ ಹುಡುಗನೊಂದಿಗೆ (ವಿದ್ಯಾರ್ಥಿಯೂ ಹೌದು) ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇನ್ನೂ ಹೆಚ್ಚಿನ ಹುಡಗರಿಗೆ ಕಾಮ ಪ್ರಚೋದನೆ ಮಾಡುವಂತಹ ವೀಡಿಯೋ ಕಳುಹಿಸಿದ್ದಾಳೆ. ಈ ಸಾಕ್ಷ್ಯಾಧಾರಗಳು ಬೆಳಕಿಗೆ ಬಂದ ನಂತರ ಆಕೆಯನ್ನ ಬಂಧಿಸಲಾಗಿದೆ ಎಂದು ಟ್ಯಾಂಪಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ

ಜಿಂಗರ್‌ನನ್ನ ಬಂಧಿಸಿದ ಬಳಿಕ ಟ್ಯಾಂಪಾ ಪೊಲೀಸ್‌ ಅಧಿಕಾರಿಗಳು, ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸುವುದಾಗಿ ಕರೆ ನೀಡಿದ್ದರು. ಈಕೆಯ ಮೋಸದ ಜಾಲಕ್ಕೆ ಯಾರೆಲ್ಲಾ ಬಲಿ ಆಗಿದ್ದೀರಿ, ಅವರು ಮುಂದೆ ಬಂದು ತಮ್ಮ ದೂರು ಸಲ್ಲಿಸಬಹುದು. ನಮ್ಮ ಪೊಲೀಸ್‌ ಇಲಾಖೆ ದೂರು ನೀಡುವವರಿಗೆ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದರು. ಪೊಲೀಸ್‌ ಪ್ರಕಟಣೆ ಬಳಿಕ ನಾಲ್ವರು ಹುಡುಗರು ದೂರು ನೀಡಲು ಮುಂದೆ ಬಂದರು, ಬಳಿಕೆ ಆಕೆಯ ಮೇಲಿನ ಅಪರಾಧವನ್ನು ದೃಢೀಕರಿಸಲಾಯಿತು. ಇದನ್ನೂ ಓದಿ: ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಕೊಲ್ಲುತ್ತೇವೆಂದ ರಕ್ಷಣಾ ಸಚಿವರ ಹೇಳಿಕೆಗೆ ಪಾಕ್‌ ಖಂಡನೆ

ಮಾಯಗಾತಿಯ ಪ್ಲ್ಯಾನ್‌ ಹೇಗಿತ್ತು?
ಕಿರಿಯ ಹುಡುಗರೊಂದಿಗೆ ಸೆಕ್ಸ್‌ ಮಾಡಲು ಬಯಸಿದ್ದ ಮಹಿಳೆ 14 ವರ್ಷದ ಹುಡುಗಿಯಂತೆ ನಟಿಸುತ್ತಿದ್ದಳು. ಮೊದಲ ಹುಡುಗನೊಂದಿಗೆ ಅನೇಕ ಬಾರಿ ಸೆಕ್ಸ್‌ ನಡೆಸಿದ್ದಳು. ಇನ್ನೂ ಹೆಚ್ಚಿನ ಹುಡುಗರನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು‌ ಸೋಶಿಯಲ್‌ ಮೀಡಿಯಾ ಅಪ್‌ವೊಂದರ ಮೂಲಕ ಹುಡುಗರಿಗೆ ಅಶ್ಲೀಲ ವೀಡಿಯೋಗಳನ್ನ ಕಳುಹಿಸಿ ಕಾಮಕ್ಕೆ ಪ್ರಚೋದನೆ ನೀಡುತ್ತಿದ್ದಳು. ಬಳಿಕ ಹುಡುಗರನ್ನು ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ತಾನೂ ಸಹ ವಿದ್ಯಾರ್ಥಿನಿ ಎಂದು ಹುಡುಗರೊಂದಿಗೆ ನಾಟಕವಾಡಿದ್ದಳು, ನಂತರ ಅವರೊಂದಿಗೆ ಸೆಕ್ಸ್‌ನಲ್ಲಿ ತೊಡಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈಕೆಯ ಮಾಯಾಜಾಲಕ್ಕೆ ಸಿಲುಕಿದ್ದ ಬಲಿಪಶುಗಳ ವಯಸ್ಸು 12 ರಿಂದ 15 ವರ್ಷ ಇದೆ. ಓರ್ವನಿಗೆ ಮಾತ್ರ 18 ವರ್ಷ ವಯಸ್ಸಾಗಿದೆ. ಸದ್ಯ ಆಕೆ ವಿರುದ್ಧ 11 ಪ್ರಕರಣಗಳ ಅಡಿ ಕೇಸ್‌ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

Share This Article