ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ

Public TV
1 Min Read

ಚಿಕ್ಕಮಗಳೂರು: ʻಉರಿಗೌಡ-ನಂಜೇಗೌಡʼ (Urigowda, Nanjegowda) ಕಾಲ್ಪನಿಕ ಪಾತ್ರ ಅಂದವರು ನಮ್ಮನ್ನ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಒತ್ತಾಯಿಸಿದ್ದಾರೆ.

ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಹೆಣ್ಣುಮಕ್ಕಳನ್ನು ಅವಮಾನಿಸಿದ್ರೆ ಕೈ ಕತ್ತರಿಸುತ್ತೇವೆ – ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ

ʻಉರಿಗೌಡ-ನಂಜೇಗೌಡʼ ಅನ್ನೋದು ಕಾಲ್ಪನಿಕ ಪಾತ್ರ, ಅದು ಸಿ.ಟಿ ರವಿ, ಅಶ್ವಥ್ ನಾರಾಯಣ್ (Ashwath Narayan), ಬಿಜೆಪಿ, ಆರ್‌ಎಸ್‌ಎಸ್‌ (RSS) ಸೃಷ್ಠಿ ಎಂದವರು ನಮ್ಮನ್ನ ಕ್ಷಮೆ ಕೇಳಬೇಕು. ದಿವಂಗತ ದೇ. ಜವರೇಗೌಡರು ಸಾಮಾನ್ಯರಲ್ಲ. ಅವರನ್ನ, ಅವರು ಬರೆದ ಪುಸ್ತಕವನ್ನ ನೀವು ಅವಮಾನಿಸುತ್ತಿದ್ದೀರಿ. ಮಾಜಿ ಪ್ರಧಾನಿ ದೇವೇಗೌಡರು ಬಿಡುಗಡೆ ಮಾಡಿರುವ ʻಸುವರ್ಣ ಮಂಡ್ಯʼ ಪುಸ್ತಕವನ್ನ ನೀವು ಅಪಮಾನ ಮಾಡುತ್ತಿದ್ದೀರಿʼ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ

ಮುಂದುವರಿದು ಹೆಚ್.ಡಿ ಕುಮಾರಸ್ವಾಮಿ ಅವರ ʻಉರಿಗೌಡ-ನಂಜೇಗೌಡರಿಗಿಂತ ನಮಗೆ ಬೋರೇಗೌಡ ಮುಖ್ಯʼ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬೋರೇಗೌಡನ ಮೇಲೆ ಪ್ರೀತಿ ಇರೋದಕ್ಕೆ ಬಡ ಬೋರೇಗೌಡನ ಖಾತೆಗೆ ವರ್ಷಕ್ಕೆ 10 ಸಾವಿರ ರೂ. ಹಾಕುತ್ತಿರುವುದು. ಬೋರೇಗೌಡನ ಮೇಲೆ ಕಾಳಜಿ ಇರೋದಕ್ಕೆ ಹಾಲಿಗೆ 5 ರೂ. ಸಹಾಯಧನ ಕೊಡ್ತಿರೋದು, ಬಡ್ಡಿ ಇಲ್ಲದೇ 5 ಲಕ್ಷ ಹಣ ಕೊಡುತ್ತಿರೋದು ಎಂದು ತಿರುಗೇಟು ನೀಡಿದ್ದಾರೆ.

ಬೋರೇಗೌಡನ ಬಗ್ಗೆ ಕಾಳಜಿ ಇದೆ. ಆದರೆ, ಪ್ರೇರಣೆ ಇತಿಹಾಸದಿಂದ ಸಿಗುತ್ತೆ. ನಾವು ಬರೀ ಮನುಷ್ಯರೆಂದು ಕರೆಸಿಕೊಂಡರೇ ಸಾಲೋದಿಲ್ಲ. ಮನುಷ್ಯರು ಎಂದಾಗ ನೀವು ಯಾರು ಅನ್ನೋ ಪ್ರಶ್ನೆ ಬರುತ್ತೆ. ಹೊರಗಿನವರು ಕೇಳಿದಾಗ ನಾನು ಭಾರತೀಯ, ನಾವು ಕನ್ನಡಿಗರು, ನಾವು ಹಿಂದೂ ಅಂತಾ ಹೇಳುತ್ತೇವೆ. ಜಾತಿಯಲ್ಲಿ ಯಾರು ಅಂದ್ರೆ ಜಾತಿ ಹೆಸರೇಳುತ್ತೇವೆ. ಅದರಲ್ಲಿ ಯಾರ ಮಗ ಅಂದರೆ ತಂದೆ ಹೆಸರೇಳುತ್ತೇವೆ. ಅದೇ ರೀತಿ ನಮಗೊಂದು ಅಸ್ಮಿತೆ ಇದೆ, ಆ ಮೂಲಕ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *