ಕೊಹ್ಲಿಯಂತೆ ಧೋನಿ ಹೆಲ್ಮೆಟ್ ನಲ್ಲಿ ತ್ರಿವರ್ಣ ಧ್ವಜ ಯಾಕಿಲ್ಲ?

Public TV
1 Min Read

ನವದೆಹಲಿ: ನಾಯಕ ಎಂಎಸ್ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಯಾಕೆ ಧರಿಸುವುದಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಬಿಸಿಸಿಐ ಲೋಗೋದ ಕೆಳಗೆ ಅಥವಾ ಮೇಲುಗಡೆ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸುತ್ತಾರೆ. ಆದರೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸದೇ ಅಂಗಳಕ್ಕೆ ಇಳಿಯುತ್ತಿದ್ದರು. ಹೀಗಾಗಿ ಯಾಕೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸಲ್ಲ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರು.

ಧೋನಿ ವಿಕೆಟ್ ಕೀಪಿಂಗ್ ಮಾಡುವ ವೇಳೆ ಕೆಲ ಸಮಯ ಹೆಲ್ಮೆಟ್ ಬಿಚ್ಚಿಟ್ಟು ಕೀಪಿಂಗ್ ಮಾಡುತ್ತಾರೆ. ಈ ಸಮಯದಲ್ಲಿ ಹೆಲ್ಮೆಟ್ ಅನ್ನು ನೆಲದ ಮೇಲೆ ಬಿಚ್ಚಿಡಬೇಕಾಗುತ್ತದೆ. ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ ಇದ್ದರೆ ಅದಕ್ಕೆ ಅಪಮಾನ ಮಾಡಿದ ಹಾಗೇ ಎಂಬ ಕಾರಣಕ್ಕೆ ಧೋನಿ ತ್ರಿವರ್ಣ ಧ್ವಜ ಇಲ್ಲದ ಹೆಲ್ಮೆಟ್ ಧರಿಸುತ್ತಾರೆ. ಇದನ್ನೂ ಓದಿ: ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

ಧೋನಿ ಅವರಿಗೆ 2011 ರಲ್ಲಿ ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಸ್ಥಾನವನ್ನು ನೀಡಿ ಗೌರವಿಸಿದೆ. ಧೋನಿ ತಮ್ಮ ದೇಶ ನೀಡುವ ಗೌರವದಂತೆ ಸೈನಿಕರಿಗೂ ಹೆಚ್ಚಿನ ಗೌರವ ನೀಡುತ್ತಾರೆ. ಅಂದಹಾಗೇ ಟೀಂ ಇಂಡಿಯಾ ಮತ್ತೊಬ್ಬ ಆಟಗಾರ ಗೌತಮ್ ಗಂಭೀರ್ ಸಹ ಇದೇ ಸಾಲಿನಲ್ಲಿ ಬರುತ್ತಾರೆ. ಧೋನಿ ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ ರೀತಿಯಲ್ಲೇ ಗಂಭೀರ್ ಸಹ ಸೈನ್ಯ ಸೇರುವ ಆಸೆ ಹೊಂದಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಕುರಿತು ತಮ್ಮ ಮನದ ಆಸೆಯನ್ನು 2018ರ ಗಣರಾಜೋತ್ಸವ ವೇಳೆ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಆ ಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು – ಪಾಂಡೆ ವಿರುದ್ಧ ಕ್ಯಾಪ್ಟನ್ ಕೂಲ್ ಗರಂ

Share This Article
Leave a Comment

Leave a Reply

Your email address will not be published. Required fields are marked *