ಇರಾನ್‌ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ಯುಕೆ, ಫ್ರಾನ್ಸ್‌, ಜರ್ಮನಿ ಸಿದ್ಧ

2 Min Read

ನ್ಯೂಯಾರ್ಕ್: ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಇರಾನ್‌ನ (Iran) ಪ್ರತೀಕಾರದ ಮಿಲಿಟರಿ ಕ್ರಮಗಳನ್ನು ಎದುರಿಸಲು ಅಮೆರಿಕ (US) ಜೊತೆ ಕೈಜೋಡಿಸುವುದಾಗಿ ಬ್ರಿಟನ್ (Britain), ಫ್ರಾನ್ಸ್ (France) ಮತ್ತು ಜರ್ಮನಿ (Germany) ಸಿದ್ಧವಾಗಿವೆ.‌

ಕೀರ್ ಸ್ಟಾರ್ಮರ್, ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಡ್ರಿಕ್ ಮೆರ್ಜ್ ಅವರು, ಮಿತ್ರರಾಷ್ಟ್ರಗಳ ಗುರಿಗಳ ವಿರುದ್ಧ ಇರಾನ್‌ ಅಜಾಗರೂಕ ದಾಳಿಗಳನ್ನು ನಡೆಸುತ್ತಿದೆ. ಈ ದಾಳಿಗಳು ತಮ್ಮ ನಾಗರಿಕರು ಮತ್ತು ಈ ಪ್ರದೇಶದಲ್ಲಿ ನಿಯೋಜಿಸಲಾದ ಮಿಲಿಟರಿ ಸಿಬ್ಬಂದಿಗೆ ನೇರ ಬೆದರಿಕೆಯನ್ನು ಒಡ್ಡಿವೆ ಎಂದು ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ವಾರ್; ಬೆಂಗಳೂರಿನಿಂದ ಹೊರಡಬೇಕಿದ್ದ 10 ವಿಮಾನಗಳು ಕ್ಯಾನ್ಸಲ್

ಮೂರು ದೇಶಗಳು ತಮ್ಮ ಹಾಗೂ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಲು ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿರುವುದಾಗಿ ಹೇಳಿವೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಕ್ರಮಕ್ಕೆ ಮುಂದಾಗಿದೆ.

ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ನಿರ್ವಹಿಸಲು ಅಮೆರಿಕ ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಒಪ್ಪಿಕೊಂಡಿವೆ ಎಂದು ತಿಳಿಸಲಾಗಿದೆ. ಆದರೂ ಯಾವುದೇ ನಿರ್ದಿಷ್ಟ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಸೈಪ್ರಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸರಣಿ ದಾಳಿಗಳು ನಡೆದಿವೆ. ಅದರ ಬೆನ್ನಲ್ಲೇ ಮೂರು ದೇಶಗಳಿಂದ ಹೇಳಿಕೆ ಬಂದಿದೆ. ಬ್ರಿಟನ್ ರಕ್ಷಣಾ ಸಚಿವಾಲಯವು ಅಕ್ರೋತಿರಿ ನೆಲೆಯಲ್ಲಿರುವ ತನ್ನ ಮಿಲಿಟರಿ ನೆಲೆಯನ್ನು ಶಂಕಿತ ಡ್ರೋನ್ ಹೊಡೆದಿದೆ ಎಂದು ಹೇಳಿದೆ. ಫ್ರಾನ್ಸ್‌ನಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾನುವಾರ ಫ್ರೆಂಚ್ ನೌಕಾ ನೆಲೆಯಲ್ಲಿನ ಹ್ಯಾಂಗರ್‌ಗೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ʻರೋರಿಂಗ್ ಲಯನ್ʼ – ಲೆಬನಾನ್‌ ಮೇಲೆ ಇಸ್ರೇಲ್‌ ಮಿಸೈಲ್‌ ಮಳೆ; 31 ಮಂದಿ ಸಾವು

ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ಹೊರತಾಗಿ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಓಮನ್ ಮತ್ತು ಬಹ್ರೇನ್ ದೇಶಗಳ ವಿದೇಶಾಂಗ ಮಂತ್ರಿಗಳು ಭಾನುವಾರ ತುರ್ತು ವರ್ಚುವಲ್ ಸಭೆಯನ್ನು ಕರೆದಿದ್ದರು. ಇರಾನ್ ಕ್ಷಿಪಣಿ ದಾಳಿಗಳು ಅಮೆರಿಕದ ಮಿಲಿಟರಿ ನೆಲೆಗಳು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ವಸತಿ ನೆರೆಹೊರೆಗಳನ್ನು ತಮ್ಮ ಪ್ರದೇಶಗಳು ಮತ್ತು ಜೋರ್ಡಾನ್‌ನಲ್ಲಿರುವ ಮೇಲೆ ಹೊಡೆದಿವೆ ಎಂದು ತಿಳಿಸಿದ್ದಾರೆ.

Share This Article