ಬಂದೇ ಬಿಡ್ತು ಎಡಿಟ್ ಬಟನ್ – ಟ್ವಿಟ್ಟರ್ ರೋಲ್‌ಔಟ್ ಪ್ರಾರಂಭ

Public TV
1 Min Read

ವಾಷಿಂಗ್ಟನ್: ದೀರ್ಘಕಾಲದ ಬಳಕೆದಾರರ ಬೇಡಿಕೆಯನ್ನು ಇದೀಗ ಟ್ವಿಟ್ಟರ್ ಪೂರೈಸಲು ಪ್ರಾರಂಭಿಸಿದೆ. ಟ್ವಿಟ್ಟರ್ ಎಡಿಟ್ ಹಾಗೂ ಡಿಸ್‌ಲೈಕ್ ಬಟನ್‌ಗಳನ್ನು ರೋಲ್‌ಔಟ್ ಮಾಡುತ್ತಿದೆ.

ಏಪ್ರಿಲ್ ತಿಂಗಳಿನಲ್ಲಿ ಟ್ವಿಟ್ಟರ್ ಸಿಇಒ ಪಾಗ್ ಅಗರ್ವಾಲ್ ಎಡಿಟ್ ಬಟನ್‌ಅನ್ನು ತರುವ ಬಗ್ಗೆ ತಿಳಿಸಿದ್ದರು. ಬಳಿಕ ಟ್ವಿಟ್ಟರ್ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ಎಲೋನ್ ಮಸ್ಕ್ ಈ ಫೀಚರ್ ಕುರಿತು ಟ್ವೀಟ್ ಮಾಡಿದ್ದರು. ಅಂದಿನಿಂದ ಈ ಫೀಚರ್ ಬಗ್ಗೆ ಬಳಕೆದಾರರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಸೇರಲು ಗರ್ಭಿಣಿ ಅನರ್ಹರು ಎಂದಿದ್ದ ಬ್ಯಾಂಕ್ ವಿರುದ್ಧ ನೋಟಿಸ್

ಟ್ವಿಟ್ಟರ್ ಈಗಾಗಲೇ ಈ ಎರಡೂ ಫೀಚರ್‌ಗಳನ್ನು ಹೊರ ತರಲು ಪ್ರಾರಂಭಿಸಿದೆಯಾದರೂ ಈ ಫೀಚರ್‌ಗಳು ಸದ್ಯ ಸೀಮಿತ ಬಳಕೆದರರು ಮಾತ್ರವೇ ಉಪಯೋಗಿಸಬಹುದಾಗಿದೆ. ವರದಿಯ ಪ್ರಕಾರ ಟ್ವಿಟ್ಟರ್ ಲ್ಯಾಂಗ್ವೇಜ್ ಫಿಲ್ಟರ್(ಭಾಷಾ ಫಿಲ್ಟರ್) ಹೆಸರಿನಲ್ಲಿ ಎಡಿಟ್ ಬಟನ್ ಅನ್ನು ಹೊರ ತಂದಿದೆ. ಇದನ್ನೂ ಓದಿ: ಅಗ್ನಿವೀರ್‌ ನೇಮಕಾತಿ ನೋಟಿಫಿಕೇಶನ್‌ ಪ್ರಕಟ – 8ನೇ ತರಗತಿ ಪಾಸ್‌ ಆದ್ರೂ ಸೇನೆ ಸೇರಬಹುದು

ಅನೇಕ ಬಾರಿ ನಾವು ಆಕಸ್ಮಿಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಬರೆದು ಪೋಸ್ಟ್ ಮಾಡುತ್ತೇವೆ. ಕೆಲವೊಮ್ಮ ನಿಂದನೀಯ ಭಾಷೆಯನ್ನು ಬಳಸಿ ಸಮಾಜದ ಟೀಕೆ, ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಪೋಸ್ಟ್ಅನ್ನು ಎಡಿಟ್ ಮಾಡಲು ಅಥವಾ ಅಳಿಸಲು ಆಯ್ಕೆ ಮೊದಲಿನಿಂದಲೇ ಇತ್ತು. ಆದರೆ ಇಲ್ಲಿಯವರೆಗೆ ಟ್ವಿಟ್ಟರ್‌ನಲ್ಲಿ ಇರಲಿಲ್ಲ. ಇದೀಗ ನಿಧಾನವಾಗಿ ಟ್ವಿಟ್ಟರ್ ಬಳಕೆದಾರರಿಗೆ ಎಡಿಟ್ ಬಟನ್ ಅನ್ನು ನೀಡಲು ಪ್ರಾರಂಭಿಸಿದ್ದು, ಶೀಘ್ರವೇ ಎಲ್ಲಾ ಬಳಕೆದಾರರಿಗೂ ಲಭ್ಯವಾಗುವ ಸಾಧ್ಯತೆ ಇದೆ.

Live Tv

Share This Article
Leave a Comment

Leave a Reply

Your email address will not be published. Required fields are marked *