ಕಾನ್ಪುರ ಲ್ಯಾಂಬೋರ್ಗಿನಿ ಕಾರು ಅಪಘಾತ – ತಂಬಾಕು ಉದ್ಯಮಿ ಪುತ್ರ ಶಿವಂ ಮಿಶ್ರಾ ಅರೆಸ್ಟ್‌

2 Min Read

ಲಕ್ನೋ: ಕಾನ್ಪುರದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಲ್ಯಾಂಬೋರ್ಗಿನಿ (Lamborghini Revuelto) ಕಾರು ಅಪಘಾತ ಪ್ರಕರಣ ಸಂಬಂಧ ತಂಬಾಕು ಉದ್ಯಮಿ ಕೆಕೆ ಮಿಶ್ರಾ (K.K.Mishra) ಅವರ ಪುತ್ರ ಶಿವಂ ಮಿಶ್ರಾ ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧನವಾಗುತ್ತಿದ್ದಂತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೀಘ್ರವೇ ಕೋರ್ಟ್‌ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಗಾಡಿ ಟಚ್ ಆಗಿದ್ದಕ್ಕೆ ಕಿರಿಕ್ – ಕಾರ್‌ ಬಾನೆಟ್ ಮೇಲೆ ಗೂಡ್ಸ್ ಚಾಲಕನನ್ನು 1 ಕಿ.ಮೀ ಎಳೆದೊಯ್ದು ದುರ್ವರ್ತನೆ

Lamborghini Revuelto Crashed

ಜನರು, ವಾಹನಗಳಿಗೆ ಗುದ್ದಿದ ಶಿವಂ ಮಿಶ್ರಾ
ತಂಬಾಕು ಉದ್ಯಮಿ ಕೆ.ಕೆ ಮಿಶ್ರಾ (K.K.Mishra) ಅವರ ಮಗ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ರೆವೆಲ್ಟೊ (Lamborghini Revuelto) ಕಾರು ಕಾನ್ಪುರದ ವಿಐಪಿ ರಸ್ತೆಯಲ್ಲಿ ಪಾದಚಾರಿಗಳು ಮತ್ತು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಕಾನ್ಪುರದಲ್ಲಿ ಇತ್ತೀಚೆಗೆ ನಡೆದಿತ್ತು. ಅಪಘಾತದಲ್ಲಿ 6 ಜನ ಗಾಯಗೊಂಡಿದ್ದರು. ಕಾರು ವಶಪಡಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಆ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಶಿವಂ ಮಿಶ್ರಾ ಸೂಪರ್ ಕಾರನ್ನ ಅತಿ ವೇಗದಲ್ಲಿ ಚಲಾಯಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

ವೇಗವಾಗಿ ಬಂದ ಕಾರು ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ನಂತರ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್‌ ಬೈಕ್‌ಗೆ ಗುದ್ದಿತ್ತು. ಮೋಟಾರ್ ಸೈಕಲ್ ಕಾರಿನ ಮುಂಭಾಗದ ಕೆಳಗೆ ಸಿಲುಕಿಕೊಂಡು ಸ್ವಲ್ಪ ದೂರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಅಪಘಾತದಲ್ಲಿ ಗಾಯಗೊಂಡವರಲ್ಲಿ ಒಬ್ಬನನ್ನ ತೌಫಿಕ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಅವರ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಇತರರಿಗೆ ಮೂಳೆ ಮುರಿತ ಉಂಟಾಗಿತ್ತು. ಇದನ್ನೂ ಓದಿ: ಅಮೆರಿಕ ಈಗ ವಿಶ್ವದ ನಂ.1 ಇಂಧನ ಉತ್ಪಾದಕ ರಾಷ್ಟ್ರ: ಡೊನಾಲ್ಡ್‌ ಟ್ರಂಪ್‌

ತನಿಖೆ ಆರಂಭದಲ್ಲಿ ಮಿಶ್ರಾ ಅವರ ಕುಟುಂಬ ವಕೀಲರು ಡ್ರೈವರ್‌ ಮೋಹನ್‌ ಕಾರು ಚಲಾಯಿಸುತ್ತಿದ್ದ, ಆದ್ರೆ ಶಿವಂ ಅವರನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಚಾಲಕನ ಸೀಟಿನಲ್ಲಿ ಮಿಶ್ರಾ ಕುಳಿತಿದ್ದು, ಸ್ಪಷ್ಟವಾಗಿ ತೋರಿಸಿದ್ದರು. ಅಲ್ಲದೇ ಪ್ರತ್ಯಕ್ಷದರ್ಶಿಗಳೂ ಸಹ ಮಿಶ್ರಾ ವಿರುದ್ಧ ಸಾಕ್ಷಿ ನುಡಿದಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಇ-ರಿಕ್ಷಾ ಚಾಲಕ ಮೊಹಮ್ಮದ್‌ ತೌಫೀಕ್‌ ದೂರು ನೀಡಿದ ಬಳಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳ ಪಾಲಿಗಿಂದು ಬಿಗ್‌ ಡೇ – ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

Share This Article