ಫ್ಲೆಕ್ಸ್‌ ವಿಚಾರದಲ್ಲಿ ಕೊನೆಗೂ ಎಚ್ಚೆತ್ತ ಮಂಡ್ಯ ಎಸ್ಪಿ

1 Min Read

ಮಂಡ್ಯ: ನಗರದಲ್ಲಿ ರಾಜಕಾರಣಿಗಳಿಗೆ ಪೈಪೋಟಿ ಕೊಡುವಂತೆ ರಾರಾಜಿಸುತ್ತಿದ್ದ ಎಸ್ಪಿ ಶೋಭಾರಾಣಿ (SP Shobharani) ಅವರ ಫ್ಲೆಕ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ವರದಿಗಳು ಬಿತ್ತರವಾರದ ಬಳಿಕ ಎಚ್ಚೆತ್ತುಕೊಂಡಿದ್ದಾರೆ.

- Advertisement -

ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದಾದ್ಯಂತ ಶೋಭಾರಾಣಿ ಅವರ ಫ್ಲೆಕ್ಸ್‌ಗಳನ್ನು‌ (Ugadi Flex) ಹಾಕಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಸಹ ಕಾರಣವಾಗಿತ್ತು. ಈ ಸಂಬಂಧ ʻಪಬ್ಲಿಕ್ ಟಿವಿʼಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದೀಗ ಎಚ್ಚೆತ್ತ ಎಸ್ಪಿ ಶೋಭಾರಾಣಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೊಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ; ಶಾಮನೂರು ಮೊಮ್ಮಗನಿಗೆ ಟಿಕೆಟ್‌ ಘೋಷಿಸಿದ ಕಾಂಗ್ರೆಸ್‌

- Advertisement -

- Advertisement -

ನನ್ನ ಭಾವಚಿತ್ರವನ್ನ ಬಳಸಿಕೊಂಡು ಯಾವುದೇ ಫ್ಲೆಕ್ಸ್‌ ಬ್ಯಾನರ್ ಹಾಗೂ ಪ್ರಚಾರ ಕಾರ್ಯಗಳನ್ನು ಬಳಸಬೇಡಿ. ಕಾನೂನು ಮತ್ತು ವೈಯಕ್ತಿಕ ಗೌರವ ಕಾಪಡೋದು ನನ್ನ ಕರ್ತವ್ಯವಾಗಿದೆ. ದಯವಿಟ್ಟು ನನ್ನ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಪೋಸ್ಟ್ ಮಾಡಿದ್ದಾರೆ‌. ಇದನ್ನೂ ಓದಿ: ಬೆಂಗಳೂರು | ನಿಂತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು 

- Advertisement -

Share This Article