ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

Public TV
2 Min Read

ಅಹಮದಾಬಾದ್: ಗುಜರಾತಿನ ಮೋರ್ಬಿ ಸೇತುವೆ ದುರಂತದ (Morbi Bridge Collapse) ಕುರಿತು ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ (Saket Gokhale) ಅವರನ್ನ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ (Saket Gokhale) ಅವರು ಬಿಜೆಪಿ (BJP) ಹಾಗೂ ಪ್ರಧಾನಿ ಮೋದಿ (Narendra Modi) ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದು ರಾಜಕೀಯ ಸೇಡು ಎಂದು ಕಿಡಿ ಕಾರಿದ್ದಾರೆ.

ಗೋಖಲೆ ಅವರನ್ನು ಬಂಧಿಸಲು ಕಾರಣವಾದ ಟ್ವೀಟ್ ಯಾವುದೆಂದು ನಿರ್ದಿಷ್ಟಪಡಿಸಿಲ್ಲ. ಆದರೆ ಗುಜರಾತ್ ಸರ್ಕಾರದ ಸತ್ಯ ಪರಿಶೀಲನಾ ಘಟಕವು ಗೋಖಲೆ ಅವರ ಇತ್ತೀಚಿನ ಟ್ವೀಟ್ ವೊಂದನ್ನು ಗುರುತಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

ಇತ್ತೀಚಿನ ಟ್ವೀಟ್‌ನಲ್ಲಿ ಸಾಕೇತ್ ಗೋಖಲೆ `ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಮಾಹಿತಿ ಪ್ರಕಾರ ಪ್ರಧಾನಿ ಅವರು ಮೋರ್ಬಿಗೆ ಭೇಟಿ ನೀಡಲು ಖರ್ಚಾಗಿದ್ದು 30 ಕೋಟಿ ರೂ.’ ಎಂದು ಉಲ್ಲೇಖಿಸಿದ್ದರು. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸತ್ಯ ಪರಿಶೀಲನೆ ನಡೆಸಿ ಆರ್‌ಟಿಐ ಮಾಹಿತಿ ಸುಳ್ಳು ಎಂದು ಹೇಳಿತ್ತು. ಇದನ್ನೂ ಓದಿ: ಮೋರ್ಬಿ ದುರಂತ: 1 ಲಕ್ಷ ರೂ. ದಂಡ ಪಾವತಿಸಿ – ಪುರಸಭೆ ವಿರುದ್ಧ ಹೈಕೋರ್ಟ್ ಗರಂ

ಸಾಕೇತ್ ಗೋಖಲೆ ಅವರು ನಿನ್ನೆ ರಾತ್ರಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಂದ ಗುಜರಾತ್ ಪೊಲೀಸರ್ ಬಂಧಿಸಿ ಕರೆದೊಯ್ದಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಬಿಜೆಪಿಯಾಗಲಿ ಅಥವಾ ಗುಜರಾತ್ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ಅಕ್ಟೋಬರ್ 30 ರಂದು ಗುಜರಾತಿನ ಮೋರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದರು. ಬಳಿಕ ತನಿಖೆಯಲ್ಲಿ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಸಂತ್ರಸ್ತರ ಆರೋಗ್ಯ ವಿಚಾರಿಸಿ, ಪರಿಹಾರ ಘೋಷಣೆ ಮಾಡಿದ್ದಾರೆ. ನಂತರದಲ್ಲಿ ಮೋರ್ಬಿ ಪುರಸಭೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಗುಜರಾತ್ ಹೈಕೋರ್ಟ್ 1 ಲಕ್ಷ ದಂಡ ಸಹ ವಿಧಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *