ಮತ ಎಣಿಕೆಗೂ ಮುನ್ನ ಸುಪ್ರೀಂ ಕೋರ್ಟ್ ಮೊರೆ ಹೋದ ಟಿಎಂಸಿ

0 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ತೃಣಮೂಲ ಕಾಂಗ್ರೆಸ್‌, ಸುಪ್ರೀಂ ಕೋರ್ಟ್‌ ಕದ ತಟ್ಟಿದೆ. ಕೇಂದ್ರ ವೀಕ್ಷಕರ ನಿಯೋಜನೆಯನ್ನು ಆಕ್ಷೇಪಿಸಿ ಸುಪ್ರೀಂಗೆ ಟಿಎಂಸಿ ಅರ್ಜಿ ಸಲ್ಲಿಸಿದೆ.

ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಮತ ಎಣಿಕೆ ಪ್ರಕ್ರಿಯೆಗೆ ವೀಕ್ಷಕರನ್ನು ನಿಯೋಜಿಸಿದ್ದಕ್ಕೆ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರಿ ನೌಕರರನ್ನು ಮಾತ್ರ ವೀಕ್ಷಕರಾಗಿ ನೇಮಿಸುವ ನಿರ್ಧಾರವನ್ನು ಪಕ್ಷ ಪ್ರಶ್ನಿಸಿತು. ಇದರಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ನೌಕರರಿಗೆ ಮಾತ್ರ ಜವಾಬ್ದಾರಿ ನೀಡಿದೆ. ಈ ಅರ್ಜಿಯನ್ನು ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

Share This Article