ಐವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಅಲ್ಲ: ಶಂಕರ್ ತಂಗಿ

Public TV
2 Min Read

– ನಾವ್ಯಾರು ಅಣ್ಣನ ಮನೆಗೆ ಹೋಗುತ್ತಿರಲಿಲ್ಲ
– ನಮ್ಮಣ್ಣನಿಗೆ ಟಾರ್ಚರ್ ಕೊಡುತ್ತಿದ್ದರು

ಮಂಡ್ಯ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ ಸಂಬಂಧ, ವಿಚಾರಣೆಯಲ್ಲಿರುವ ಶಂಕರ್ ಅವರ ತಂಗಿ ಹೇಳಿಕೆ ನೀಡಿದ್ದಾರೆ. ಅವರ ಸಾವಿಗೆ ಅವರೇ ಕಾರಣ ನಮ್ಮಣ್ಣ ಅಲ್ಲವೆಂದು ಸಹೋದರನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಒಂದೇ ಕುಟುಂಬದ ಐವರು ಸಾವಿನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇತ್ತ ಶಂಕರ್ ಕೂಡಾ ಮೃತ ಹೆಂಡತಿ, ಮಕ್ಕಳು ಮಾಡಿರುವ ಆರೋಪ ಸುಳ್ಳು ಎನ್ನುತ್ತಿದ್ದಾರೆ. ಇತ್ತ ಶಂಕರ್ ತಂಗಿಯು ಅಣ್ಣನ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. ಇದನ್ನೂ ಓದಿ:   ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್

ಮಂಡ್ಯದಲ್ಲಿ ಮಾಧ್ಯಮದವರೊಂಂದಿಗೆ ಮಾತನಾಡಿದ ಅವರು, ಸಾಯುವ ಮುನ್ನ ತಂದೆ ಶಂಕರ್ ವಿರುದ್ಧ ಡೆತ್ ನೋಟ್ ಬರೆದು ಮಧುಸಾಗರ್, ತಂದೆಯ ಮೇಲೆ ಗಂಭೀರ ಆರೋಪ ಮಾಡಿದ್ದಾನೆ. ಇದೀಗ ಈ ಆರೋಪಗಳನ್ನು ಶಂಕರ್ ತಂಗಿ ಪಾರ್ವತಿ ಈ ಆರೋಪಗಳೆಲ್ಲಾವೂ ಸುಳ್ಳು, ಅವರ ಸಾವಿಗೆ ನಮ್ಮ ಅಣ್ಣ ಕಾರಣ ಅಲ್ಲ, ಅವರೇ ಅವರ ಸಾವಿಗೆ ಕಾರಣ ಎಂದು ಮಂಡ್ಯದ ಹಲ್ಲೆಗೆರೆಯಲ್ಲಿ ಕಣ್ಣೀರಿಡುತ್ತಾ ಮಾತನಾಡಿದ್ದಾರೆ.

ಅವರ ತಪ್ಪು ಇಟ್ಟುಕೊಂಡು ಇನ್ನೊಬ್ಬರನ್ನ ದೂರುತ್ತಾರಲ್ಲ ಅದು ತಪ್ಪು. ನಮ್ಮಣ್ಣ ಆ ರೀತಿಯ ವ್ಯಕ್ತಿಯಲ್ಲ, ಬೇಕಿದ್ದರೆ ಅಕ್ಕಪಕ್ಕದ ಊರಿನವರನ್ನ ಕೇಳಿಕೊಳ್ಳಿ. ಅವನ ಹೆಂಡತಿ ಮದುವೆಯಾದಾಗಿನಿಂದಲೂ ನಮ್ಮಣ್ಣನಿಗೆ ಟಾರ್ಚರ್ ಕೊಡುತ್ತಿದ್ದರು. ನಮ್ಮಣ್ಣ ನೆಮ್ಮದಿಯಿಂದರಲಿ ಎಂದು ನಾವ್ಯಾರು ಮನೆಗೆ ಹೋಗುತ್ತಿರಲಿಲ್ಲ ಎಂದು ಪಾರ್ವತಿ ಅವರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಐಟಿ ದಾಳಿ ಬಳಿಕ ಕೊನೆಗೂ ಮೌನ ಮುರಿದ ಸೋನು ಸೂದ್

ನಮ್ಮಮ್ಮ ಅವರ ಮನೆಗೆ ಹೋಗುತ್ತೇವೆ ಎಂದರೆ ಗಡಗಡ ನಡುಗುತ್ತಿದ್ದರು. ನನ್ನ ಸೊಸೆ, ನನ್ನ ಮೊಮ್ಮಕ್ಕಳು ಏನಾದರು ಮಾಡ್ತಾರೆ ಅಂತಾ ಕಣ್ಣೀರಿಡುತ್ತಿದ್ದರು. ನಮಗೆ ಹಾಗೂ ನಮ್ಮ ತಾಯಿಗೆ ಚಿತ್ರಹಿಂಸೆ ಅವರು ಕೊಡುತ್ತಿದ್ದರು. ನಮ್ಮಣ್ಣ ದಯವಿಟ್ಟು ಬರಬೇಡಿ ಕಂಡ್ರೊ ಅಂತಾ ನಮ್ಮ ಬಳಿ ಕಣ್ಣೀರಿಡುತ್ತಿದ್ದರು. ಮದುವೆಯಾದಗಿನಿಂದಲೂ ಕೂಡ ನಮ್ಮಣ್ಣನ ಹೆಂಡತಿ ಹಠವಾದಿ. ನಮ್ಮ ಜೊತೆಗೆ ನಮ್ಮಣ್ಣನ ಹೆಂಡತಿ, ಮಕ್ಕಳು ಮಾತಾಡುತ್ತಿರಲಿಲ್ಲ. ನಮ್ಮಣ್ಣ ಅವರ ಕಷ್ಟವನ್ನ ಯಾವತ್ತು ನಮ್ಮ ಹತ್ತಿರ ಹೇಳಿಕೊಳ್ಳುತ್ತಿರಲಿಲ್ಲ. ಅವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಕಾರಣನಲ್ಲ. ನಮ್ಮ ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಮ್ಮಣ್ಣ ಅಂತಹವರಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *