ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

1 Min Read

ರಾಮನಗರ: ಚನ್ನಪಟ್ಟಣದಲ್ಲಿ (Channapatna) ಕಾಡಾನೆಗಳ (Wild Elephant) ಹಾವಳಿ ಮುಂದುವರೆದಿದ್ದು, ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರೋ ಘಟನೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿರೋ ಕೆರೆಯಲ್ಲಿ 3 ಕಾಡಾನೆಗಳು ಬೀಡುಬಿಟ್ಟಿದ್ದು, ರಾತ್ರಿಯಿಡೀ ಕೆರೆ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆ ತಿಂದು ನಾಶಪಡಿಸಿವೆ. ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದಿರೋ ಕಾಡಾನೆಗಳು ನಿತ್ಯ ಒಂದಲ್ಲ ಒಂದುಕಡೆ ದಾಂಧಲೆ ಎಬ್ಬಿಸಿ ರೈತರ ನಿದ್ದೆಗೆಡಿಸಿವೆ. ಇದನ್ನೂ ಓದಿ: ಕುಟುಂಬಸ್ಥರಿಂದಲೇ ಪಾಕ್‌ನ ಲಷ್ಕರ್‌ ಭಯೋತ್ಪಾದಕ ಬಿಲಾಲ್ ಆರಿಫ್‌ಗೆ ಚಾಕುವಿನಿಂದ ಇರಿದು, ಗುಂಡಿಕ್ಕಿ ಹತ್ಯೆ

ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಜೆ ಬಳಿಕ ಕಾಡಾನೆಗಳನ್ನು ವಾಪಸ್ ಕಾಡಿಗಟ್ಟಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮ ಸುಪ್ರೀಂ ಲೀಡರ್ ಬದುಕಿದ್ದಾರಾ? – ಇರಾನ್‌ಗೆ ಅಮೆರಿಕ ಪ್ರಶ್ನೆ

Share This Article