ಕಿಕಿ ಆಯ್ತು ಈಗ ದೇಶಕ್ಕೇ ಎಂಟ್ರಿ ಕೊಟ್ಟಿದೆ ಮತ್ತೊಂದು ಚಾಲೆಂಜ್!

Public TV
1 Min Read

ನವದೆಹಲಿ: ಈ ಹಿಂದೆ ಕಿಕಿ ಎಂಬ ಚಾಲೆಂಜ್ ವಿಶ್ವಾದ್ಯಂತ ಸಖತ್ ಟ್ರೆಂಡ್ ಆಗಿತ್ತು. ಇದೀಗ ಇದೇ ರೀತಿಯ ಮತ್ತೊಂದು ಇಂಟರ್‌ನೆಟ್ ಚಾಲೆಂಜ್ ಒಂದು ಕಾಲಿಡುತ್ತಿದೆ.

ನೆಟ್ಟಿಗರಲ್ಲಿ ಅದ್ಯಾವ ಚಾಲೆಂಜ್ ಎಂದು ಕುತೂಹಲ ಮೂಡಬಹುದು. ಹೌದು, ಫಾಲಿಂಗ್ ಸ್ಟಾರ್ ಎಂಬ ಚಾಲೆಂಜ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿದೆ. ಈ ಚಾಲೆಂಜ್ ಕಿಕಿ ಚಾಲೆಂಜ್‍ಗಿಂತ ಅಪಾಯಕಾರಿಯಾಗಿದ್ದು, ಚಾಲೆಂಜ್ ಸ್ವೀಕರಿಸಿದವವರು ನಡೆಯುತ್ತಲೇ ಕೆಳಗೆ ಬಿದ್ದು, ತಮ್ಮ ಅಕ್ಕಪಕ್ಕದಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡುವುದೇ ಈ ಚಾಲೆಂಜ್ ವಿಷೇಶತೆ.

https://www.instagram.com/p/BpB654NnHyn/?taken-at=194494051294885

ಈ ಚಾಲೆಂಜ್ ಅನ್ನು ಫ್ಲಂಟ್ ಯುವರ್ ವೆಲ್ತ್ ಎಂದು ಕೂಡ ಕರೆಯಲಾಗುತ್ತದೆ. ಈ ಚಾಲೆಂಜ್ ಆಗಸ್ಟ್ 2018 ರಲ್ಲಿ ರಷ್ಯಾದಲ್ಲಿ ಹುಟ್ಟಿಕೊಂಡಿತು ಎಂದು ವರದಿಗಳಿಂದ ತಿಳಿದುಬಂದಿದೆ. ನೂರಾರು ಮಂದಿ ಈ ಚಾಲೆಂಜ್ ಅನ್ನು ಸ್ವೀಕರಿಸಿ ಪ್ರಯತ್ನಿಸಿದ್ದಾರೆ. ಐಷಾರಾಮಿ ಕಾರುಗಳ ಮುಂದೆ, ಇನ್ನಿತರ ವಸ್ತುಗಳ ಮುಂದೆ ಬಿದ್ದು ಅವುಗಳ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಹಿಂದೆ ಇದೇ ರೀತಿಯ ಕಿಕಿ ಚಾಲೆಂಜ್ ಅನ್ನು ಅನೇಕರು ಸ್ವೀಕರಿಸಿದ್ದರು. ಚಾಲನೆಯಲ್ಲಿರುವ ವಾಹನದಿಂದ ಹೊರಬಂದು ವಾಹನದ ವೇಗಕ್ಕೆ ಹಾಗೂ ಹಾಡಿಗೆ ತಕ್ಕಂತೆ ಹೆಚ್ಚೆ ಹಾಕುವುದು ಚಾಲೆಂಜ್ ಆಗಿತ್ತು. ಅಷ್ಟೇ ಅಲ್ಲದೇ ಜನರು ಈ ಕಿಕಿ ಚಾಲೆಂಜ್ ಅನ್ನು ಚಲಿಸುತ್ತಿದ್ದ ಟ್ರಕ್‍ಗಳು, ಬಸ್ಸುಗಳು ಮತ್ತು ಚಲಿಸುವ ವಿಮಾನಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕ ಟ್ರೆಂಡ್ ಆಗಿತ್ತು.

https://www.instagram.com/p/BpGq1BSDAh6/?utm_source=ig_embed

https://www.instagram.com/p/BpJvgcslljD/?utm_source=ig_embed

https://www.instagram.com/p/BpJvhndlLbi/?utm_source=ig_embed

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *