ಐದು ಗ್ಯಾರಂಟಿ ಯೋಜನೆ ಪೂರೈಸಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ: ನಿಖಿಲ್

Public TV
2 Min Read

ರಾಮನಗರ: ಐದು ಗ್ಯಾರಂಟಿ  (Gurantee) ಯೋಜನೆಯನ್ನು ಪೂರೈಸಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಜಿಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy)  ಟೀಕಿಸಿದ್ದಾರೆ.

ಸಿದ್ದರಾಮಯ್ಯ (Siddaramaiah)  ಬಜೆಟ್‌ನಲ್ಲಿ ರಾಮನಗರ (Ramanagara)  ಜಿಲ್ಲೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದ ವಿಚಾರದ ಬಗ್ಗೆ ಮಾತನಾಡಿ, ಐದು ಗ್ಯಾರಂಟಿ ಯೋಜನೆ ಪೂರೈಸಲು ಸರ್ಕಾರ ಖಜಾನೆಯಲ್ಲಿ ಹಣ ಇಲ್ಲ. ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷ ಸಿಲುಕಿದೆ. ಹಾಗಾಗಿ ಬಜೆಟ್ (Budget)  ಬಗ್ಗೆ ಆಶ್ಚರ್ಯ ಪಡುವಂತದ್ದು ಏನು ಇಲ್ಲ. ರಾಮನಗರದಲ್ಲಿ ಹಿಂದಿನ ಶಾಸಕರು ನೀಡಿದ ಅನುದಾನವನ್ನೆ ಇಟ್ಟುಕೊಂಡು ಈಗಿನ ಶಾಸಕರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೋರಾಟ ಮಾಡಿ ಯಾವುದೇ ಅನುದಾನ ತಂದಿಲ್ಲ. ರಾಮನಗರ ಜಿಲ್ಲೆ ಹಾಗೂ ತಾಲೂಕು ಅಭಿವೃದ್ಧಿಗೆ ಸ್ಥಳೀಯ ಶಾಸಕರು ಮತ್ತು ಕಾಂಗ್ರೆಸ್ ಪಕ್ಷ ಗಮನಹರಿಸಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಮಾತನಾಡಿ, ರಾಜ್ಯದ 28 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಪಟ್ಟಿ ಬಿಡುಗಡೆ ಸಂಬಂಧ ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದಾರೆ. ನಾನೂ ಕೂಡಾ ದೆಹಲಿಗೆ ಹೋಗುತ್ತಿದ್ದೀನಿ. ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡ್ತೀವಿ. ಹಳೇ ಮೈಸೂರು ಭಾಗದ ಎಲ್ಲಾ ಮುಖಂಡರನ್ನ ಕರೆದು ಸಭೆ ಮಾಡಿದ್ದೇನೆ. ಶೀಘ್ರದಲ್ಲೇ ಹಳೇ ಮೈಸೂರು ಭಾಗದ ಎಲ್ಲಾ ತಾಲೂಕುಗಳಿಗೂ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ನಿರತರ ಮೇಲೆ ಮತ್ತೆ ಅಶ್ರುವಾಯು ದಾಳಿ – ಹೃದಯಾಘಾತದಿಂದ ರೈತ ಸಾವು!

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ತಂತ್ರಗಾರಿಕೆ ಮಾಡ್ತೀವಿ. ನಾನು ಮಂಡ್ಯದಿಂದ ಸ್ಪರ್ಧೆ ಮಾಡಬೇಕು ಎನ್ನುವ ಭಾವನೆಯನ್ನ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 5 ಲಕ್ಷಕ್ಕಿಂತ ಅಧಿಕ ಮತಗಳನ್ನ ಕೊಟ್ಟಿದ್ದರು. ಹಾಗಾಗಿ ಮಂಡ್ಯದ ಜನತೆಗೆ ನಾನು ಚಿರಋಣಿ ಆಗಿ ಇರ್ತೀನಿ. ಅದರೆ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಹೋರಾಟ ಮಾಡಬೇಕಿದೆ. ರಾಜ್ಯದ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸಿ ಮೋದಿಗೆ ಉಡುಗೊರೆ ನೀಡುತ್ತೀವಿ. ನನ್ನ ಸ್ಪರ್ಧೆ ಬಗ್ಗೆ ಮುಂದೆ ಚರ್ಚೆ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ:  ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

Share This Article