ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದವನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

Public TV
2 Min Read

ಗದಗ: ಅಪ್ರಾಪ್ತೆಯೋರ್ವಳನ್ನು (Minor) ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿ, ಜೀವ ಬೆದರಿಕೆ ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ (Gadag) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು (Court) ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸವದತ್ತಿ (Savadatti) ತಾಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ್ ದೊಡ್ಡಮನಿ ಅತ್ಯಾಚಾರವೆಸಗಿದ ಅಪರಾಧಿ. ಬಾಲಕಿ ನರಗುಂದ (Naragunda) ತಾಲೂಕಿನ ನಿವಾಸಿಯಾಗಿದ್ದು, ಆಕೆ ಅಪ್ರಾಪ್ತೆಯೆಂದು ತಿಳಿದಿತ್ತು. ಹೀಗಿದ್ದರೂ ಮೌಲಾಸಾಬ್ ಅವಳನ್ನು ಒತ್ತಾಯ ಪೂರ್ವಕವಾಗಿ ಬೈಕ್‌ನಲ್ಲಿ ಹತ್ತಿಸಿಕೊಂಡು ಹೋಗಿದ್ದ. ನರಗುಂದ- ಮುನವಳ್ಳಿ ರಸ್ತೆಯ ಸಿಂದೋಗಿ ಕ್ರಾಸ್ ಬಳಿಯ ಮನೆಗೆ ಕರೆದುಕೊಂಡು ಹೋದ ಆತ ಅಲ್ಲಿ ಅವಳ ಪ್ರಜ್ಞೆ ತಪ್ಪಿಸಿ ಅತ್ಯಾಚಾರ (Rape) ನಡೆಸಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ಕುರಿತು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: 15ರ ರೇಪ್ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್

ಸದ್ಯ ಈ ಪ್ರಕರಣವನ್ನು ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 2018ರ ಜುಲೈ 27 ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಸ್ತುತ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮೌಲಾಸಾಬ್‌ಗೆ ಕಲಂ 366 ರಡಿ 5 ವರ್ಷ ಜೈಲು ಶಿಕ್ಷೆ, 10,000 ರೂ. ದಂಡ ವಿಧಿಸಲಾಗಿದೆ. ಅಲ್ಲದೇ ಕಲಂ 506ರ ಅಡಿ 3 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ಕಲಂ 376(ಎಬಿ) ರೆ/ವಿ ಕಲಂ 5(ಹೆಚ್)(ಎಂ), ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ (Penalty) ಕಟ್ಟಲು ಆದೇಶ ನೀಡಲಾಗಿದೆ. ಇದನ್ನೂ ಓದಿ: ಚೆಕ್‌ ಬೌನ್ಸ್‌ ಕೇಸ್‌ – ಮಾಜಿ ಸಚಿವ ಜಾಲಪ್ಪ ಪುತ್ರಗೆ ಜೈಲು ಶಿಕ್ಷೆ

ಒಂದು ವೇಳೆ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಅಮರೇಶ್ ಹಿರೇಮಠ ವಾದ ಮಂಡಿಸಿದ್ದರು. ಇದನ್ನೂ ಓದಿ: ಹೆಲ್ಮೆಟ್‌ ಧರಿಸದೇ ಅಪ್ರಾಪ್ತ ಬಾಲಕ ಬೈಕ್‌ ಚಲಾಯಿಸಿದ್ದಕ್ಕೆ ಬಿತ್ತು 20 ಸಾವಿರ ರೂ. ದಂಡ

Share This Article
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ