ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

Public TV
1 Min Read

ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಕನ್ನಡ ಸಿನಿಮಾ ರಂಗಕ್ಕೆ ಒಂದು ಚೈತನ್ಯ ಬಂದಿತ್ತು. ಕನ್ನಡದ ಸಿನಿಮಾಗಳು ಕೂಡ ನೂರಾರು ಕೋಟಿ ದುಡ್ಡು ಮಾಡಬಲ್ಲವು ಎಂದು ಕೆಜಿಎಫ್ ತೋರಿಸಿಕೊಟ್ಟ ನಂತರವಂತೂ ಹಲವು ನಿರ್ಮಾಪಕರು ಹುಮ್ಮಸ್ಸಿನಿಂದಲೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತರು. ಪರಿಣಾಮ, ಕಳೆದ ಮೂರು ವಾರಗಳಿಂದ ಕರ್ನಾಕಟದಲ್ಲಿ ಕನ್ನಡದ್ದೇ ಹತ್ತತ್ತು ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದನ್ನೂ ಓದಿ : ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

ಕಳೆದ ವಾರ ಹನ್ನೊಂದು ಚಿತ್ರಗಳು ಬಿಡುಗಡೆಯಾದರೆ, ಇವತ್ತು ಹತ್ತು ಚಿತ್ರಗಳು ತೆರೆಗೆ ಬಂದಿವೆ. ಆದರೆ, ಫಲಿತಾಂಶ ಮಾತ್ರ ಶೂನ್ಯ ಎನ್ನುತ್ತಿವೆ ಗ್ರೌಂಡ್ ರಿಪೋರ್ಟರ್. ಕಳೆದ ವಾರ ಬಿಡುಗಡೆಯಾದ ಬಹುತೇಕ ಚಿತ್ರಗಳು ಒಂದೇ ದಿನಕ್ಕೆ ಪ್ರದರ್ಶನ ಮುಗಿಸಿವೆ. ಎರಡನೇ ಶೋಗೆ ಕೆಲವು ಥಿಯೇಟರ್ ನಲ್ಲಿ ಪ್ರದರ್ಶನ ರದ್ದು ಮಾಡಿದ್ದಾರೆ. ಕೆಲವು ಚಿತ್ರಮಂದಿರಗಳಿಂದ ಸಿನಿಮಾಗಳನ್ನು ಕಿತ್ತೇ ಹಾಕಿದ್ದಾರೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

kgf

ಈ ವಾರ ರಿಲೀಸ್ ಆದ ಚಿತ್ರಗಳಲ್ಲಿ ಕೆಲವು ಸಿನಿಮಾಗಳ ಮೊದಲ ಶೋ ಕ್ಯಾನ್ಸಲ್ ಆದ ಮಾಹಿತಿಯೂ ಇದೆ. ಪರಿಚಿತ ಮುಖಗಳಿರುವ ಕೆಲ ಸಿನಿಮಾಗಳಿಗೆ ಮೊದಲ ಪ್ರದರ್ಶನಕ್ಕೆ ಅರ್ಧ ಥಿಯೇಟರ್ ಕೂಡ ತುಂಬಿಲ್ಲ ಎನ್ನುತ್ತಿವೆ ಗ್ರೌಂಡ್ ರಿಪೋರ್ಟ್. ಹಾಗಾಗಿ ಸಹಜವಾಗಿಯೇ ನಿರ್ಮಾಪಕರಲ್ಲಿ ಆತಂಕ ಮನೆ ಮಾಡಿದೆ. ಲಂಗು ಲಗಾಮು ಇಲ್ಲದೇ ಹತ್ತತ್ತು ಸಿನಿಮಾಗಳನ್ನು ರಿಲೀಸ್ ಮಾಡಿದರೆ, ಯಾರು ಸಿನಿಮಾ ನೋಡುವುದಕ್ಕೆ ಬರುತ್ತಾರೆ ಎನ್ನುತ್ತಾರೆ ನಿರ್ಮಾಪಕರು. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

ಇತ್ತ ಹತ್ತತ್ತು ಚಿತ್ರಗಳು ರಿಲೀಸ್ ಆಗುತ್ತಿದ್ದರೆ, ಅತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚುನಾವಣೆಯಲ್ಲಿ ಬ್ಯುಸಿಯಾಗಿದೆ. ಚುನಾವಣೆಯ ನಂತರ ಈ ಕುರಿತು ಕ್ರಮ ಏನಾದರೂ ತಗೆದುಕೊಳ್ಳುತ್ತಾ? ನಿರ್ಮಾಪಕರನ್ನು ಉಳಿಸುವ ನಿಟ್ಟಿನಲ್ಲಿ ಏನು ಮಾಡಲಿದೆ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.

Share This Article
Leave a Comment

Leave a Reply

Your email address will not be published. Required fields are marked *