ಒಂದೇ ಮತದಿಂದ ಸೋತ ತಮಿಳುನಾಡು ಸಚಿವ – ಟಿವಿಕೆ ಅಭ್ಯರ್ಥಿಗೆ ರೋಚಕ ಜಯ

1 Min Read

ಚೆನ್ನೈ: ತಮಿಳುನಾಡಿನ ತಿರುಪ್ಪತ್ತೂರು (Tiruppattur) ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ (Seenivasa Sethupath) ಅವರು ಸಚಿವ ಪೆರಿಯಕರುಪ್ಪನ್ (K.R Periyakaruppan) ಅವರನ್ನು ಕೇವಲ ಒಂದು ಮತದ ಅಂತರದಿಂದ ಸೋಲಿಸಿದ್ದಾರೆ.

ತಿರುಪ್ಪತ್ತೂರು ಕ್ಷೇತ್ರವನ್ನು ಡಿಎಂಕೆಯ ಭದ್ರಕೋಟೆ ಎಂದೇ ಪರಿಗಣಿಸಲಾಗಿತ್ತು. ಈ ಕ್ಷೇತ್ರದಲ್ಲಿ ಡಿಎಂಕೆ 8 ಬಾರಿ ಜಯಗಳಿಸಿತ್ತು. ಆದರೆ ಇದೇ ಮೊದಲ ಬಾರಿಗೆ ಚುನಾವಣೆಗೆ ಇಳಿದಿರುವ ಟಿವಿಕೆ ಪಕ್ಷವು ಡಿಎಂಕೆ ಕೋಟೆಯನ್ನು ಒಂದೇ ಮತದಲ್ಲಿ ಪುಡಿ ಪುಡಿ ಮಾಡಿದೆ. ಇದನ್ನೂ ಓದಿ: Vijay Blockbuster Debut `ವಿಜಯ’ದ ಹಿಂದಿದೆ 17 ವರ್ಷದ ರಹಸ್ಯ

ಮತ ಎಣಿಕೆ ಪ್ರಕ್ರಿಯೆಯಲ್ಲಿ, ಮೊದಲ ಮೂರು ಸುತ್ತುಗಳು ಪೂರ್ಣಗೊಳ್ಳುವವರೆಗೆ ಡಿಎಂಕೆ ಅಭ್ಯರ್ಥಿ ಪೆರಿಯಕರುಪ್ಪನ್ 10,533 ಮತಗಳನ್ನು ಪಡೆದಿದ್ದರು. ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ 8,861 ಮತಗಳೊಂದಿಗೆ 2ನೇ ಸ್ಥಾನದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ತಿರುಮಾರನ್ 4,175 ಮತಗಳೊಂದಿಗೆ 3ನೇ ಸ್ಥಾನದಲ್ಲಿದ್ದರು.

ಬಳಿಕ TVK ಹಾಗೂ DMK ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. 30ನೇ ಸುತ್ತಿನ ಕೊನೆಯಲ್ಲಿ ಪೆರಿಯಕರುಪ್ಪನ್ 83,374 ಮತಗಳನ್ನು ಪಡೆದರೆ, ಶ್ರೀನಿವಾಸ ಸೇತುಪತಿ 83,375 ಮತಗಳನ್ನು ಗಳಿಸಿದರು. ಇದರಿಂದಾಗಿ ತಿರುಪ್ಪತ್ತೂರು ಕ್ಷೇತ್ರವನ್ನು ಕೇವಲ ಒಂದು ಮತದ ಅಂತರದಿಂದ ಟಿವಿಕೆ ಜಯಿಸಿತು.

ಡಿಎಂಕೆಯ ಹಾಲಿ ಸಚಿವ ಮತ್ತು ನಾಲ್ಕು ಬಾರಿ ಸತತವಾಗಿ ಗೆದ್ದಿದ್ದ ಕೆ.ಆರ್.ಪೆರಿಯಕರುಪ್ಪನ್ ಅವರು ಈ ಬಾರಿಯೂ ತಿರುಪ್ಪತ್ತೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಒಂದೇ ಮತದಿಂದ ಅವರಿಗೆ ಸೋಲಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಒಂದು ಮತದ ಮೌಲ್ಯದ ಪಾಠವನ್ನು ಒತ್ತಿ ಹೇಳುತ್ತದೆ. ಇದನ್ನೂ ಓದಿ: ರಾಜಕೀಯಕ್ಕೆ ವಿಜಯ್‌ ಬ್ಲಾಕ್‌ಬಸ್ಟರ್‌ ಎಂಟ್ರಿ – ರಶ್ಮಿಕಾ, ರಜನಿ, ಕಮಲ್‌ ಬೆಸ್ಟ್‌ ವಿಶ್‌

Share This Article