ವಿರಾಟ್ Vs ಬಾಬರ್ ರನ್‍ ಮೆಷಿನ್‌ಗಳ ಆಟಕ್ಕೆ ಸಾಕ್ಷಿಯಾಗಲಿದೆ T20 ವಿಶ್ವಕಪ್

Public TV
1 Min Read

ದುಬೈ: ಟಿ20 ವಿಶ್ವಕಪ್ ಚುಟುಕು ಸಮರದಲ್ಲಿ ಭಾರತ Vs ಪಾಕಿಸ್ತಾನ ಪಂದ್ಯವೆಂದರೆ ಅಭಿಮಾನಿಗಳ ಪಾಲಿನ ಸ್ವರ್ಗ. ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳು ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಈ ಪಂದ್ಯದಲ್ಲಿ ಭಾರತ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಪ್ರಮುಖ ಆಕರ್ಷಣೆಯಾಗಿದ್ದು, ಈ ಇಬ್ಬರು ರನ್ ಮೆಷಿನ್‌ಗಳ ಹೋರಾಟ ನೋಡಲು ವಿಶ್ವವೇ ತುದಿಗಾಲಲ್ಲಿ ನಿಂತಿದೆ.

ಭಾರತ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನಾಯಕರ ನಡುವಿನ ಹೋರಾಟ ನಡೆಯುವುದಂತು ಖಂಡಿತ. ಯಾಕೆಂದರೆ ಟೀಂ ಇಂಡಿಯಾದಲ್ಲಿ ಕಿಂಗ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಪಾಕಿಸ್ತಾನ ತಂಡದಲ್ಲಿ ಬಾಬರ್ ಬ್ಯಾಟಿಂಗ್ ಮಾಂತ್ರಿಕರಾಗಿ ವಿಶ್ವದ ಗಮನಸೆಳೆದಿದ್ದಾರೆ. ಈ ಇಬ್ಬರಲ್ಲಿ ಯಾರು ನೆಲಕಚ್ಚಿ ಬ್ಯಾಟಿಂಗ್ ಮಾಡಲು ಆರಂಭಿಸಿದರೂ ರನ್ ಮಳೆ ಸುರಿಯಲಿದ್ದು, ಬಾಲ್ ಮೈದಾನದ ಅಷ್ಟ ದಿಕ್ಕುಗಳನ್ನು ಪರಿಚಯ ಮಾಡಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?

ವಿರಾಟ್ ಕೊಹ್ಲಿ 89 ಟಿ20 ಪಂದ್ಯಗಳಿಂದ 28 ಅರ್ಧಶತಕ ಸಹಿತ 3,159 ರನ್ ಸಿಡಿಸಿದರೆ, ಬಾಬರ್ ಅಜಮ್ ಆಡಿರುವ 61 ಟಿ20 ಪಂದ್ಯಗಳಲ್ಲಿ 1 ಶತಕ, 20 ಅರ್ಧಶತಕ ಸಹಿತ 2,204 ರನ್ ಚಚ್ಚಿದ್ದಾರೆ. ಈ ಇಬ್ಬರು ರನ್ ಮಾಂತ್ರಿಕರ ಮೇಲೆ ಪಂದ್ಯ ನಿಂತಿದ್ದು, ಇವರಿಬ್ಬರೂ ಕೂಡ ಚುಟುಕು ಸಮರದಲ್ಲಿ ಹೊಡಿಬಡಿ ಆಟ ಆರಂಭಿಸಿದರೆ ಎದುರಾಳಿ ಬೌಲರ್‍ ಗಳು ಚಿಂದಿ ಆಗುವುದು ಪಕ್ಕಾ. ಹಾಗಾಗಿ ಈ ಇಬ್ಬರು ಆಟಗಾರರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದನ್ನೂ ಓದಿ: ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ

Share This Article
Leave a Comment

Leave a Reply

Your email address will not be published. Required fields are marked *