ಕೈ ಕುಲುಕದ ಸೂರ್ಯ – ಟೀಂ ಇಂಡಿಯಾದಲ್ಲಿ 2 ಬದಲಾವಣೆ

1 Min Read

ಕೊಲಂಬೋ: ಭಾರತದ (India) ವಿರುದ್ಧ ಹೈ ವೋಲ್ಟೇಜ್‌ ಟಿ20 ವಿಶ್ವಕಪ್‌ (T20 World Cup) ಪಂದ್ಯದಲ್ಲಿ ಪಾಕಿಸ್ತಾನ (Pakistan) ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿದೆ.

ಏಷ್ಯಾ ಕಪ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ (Surya Kumar Yadav) ಹ್ಯಾಂಡ್‌ ಶೇಕ್‌ (Handshake) ಮಾಡಲಿಲ್ಲವೋ ಅದೇ ರೀತಿ ಇಂದು ಪಾಕ್‌ ನಾಯಕ ಸಲ್ಮಾನ್ ಅಲಿ ಅಘಾ ಅವರ ಕೈ ಕುಲಕಲಿಲ್ಲ.

ಇಂದಿನ ಮಹತ್ವದ ಪಂದ್ಯದಲ್ಲಿ ಭಾರತ ಎರಡು ಬದಲಾವಣೆ ಮಾಡಿಕೊಂಡಿದೆ. ಸಂಜು ಸ್ಯಾಮ್ಸನ್‌ ಮತ್ತು ಅರ್ಶ್‌ದೀಪ್‌ ಸಿಂಗ್‌ ಜಾಗದಲ್ಲಿ ಅಭಿಷೇಕ್‌ ಶರ್ಮಾ ಮತ್ತು ಕುಲದೀಪ್‌ ಯಾದವ್‌ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಪಾಕ್‌ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

ಹವಾಮಾನ ವರದಿಗಳು ಇಂದು ಸಂಜೆ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಪಂದ್ಯದ ಟಾಸ್‌ ನಡೆಯುವವರೆಗೂ ಮಳೆ ಬಿದ್ದಿಲ್ಲ.

ರಾತ್ರಿ ಈ ಪಿಚ್‌ ಸ್ಪಿನ್‌ಗೆ ನೆರವಾಗಬಹುದು ಎಂಬ ಕಾರಣಕ್ಕೆ ಭಾರತ ತಂಡದಲ್ಲಿ ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌, ರಿಂಕು ಸಿಂಗ್‌ ಇದ್ದಾರೆ. ವೇಗದ ಬೌಲಿಂಗ್‌ನಲ್ಲಿ ಬುಮ್ರಾ, ಹಾರ್ದಿಕ್‌ ಪಾಂಡ್ಯ ಜೊತೆ ಶಿವಂ ದುಬೆ ಇದ್ದಾರೆ.

Share This Article