ಫೈನಲಿನಲ್ಲಿ ಸೋಲೇ ಇಲ್ಲ – ಶಿವಂ ದುಬೆ ಟೀಂ ಇಂಡಿಯಾದ ಲಕ್ಕಿ ಪ್ಲೇಯರ್‌

2 Min Read

ಅಹಮದಾಬಾದ್‌: ಟೀಂ ಇಂಡಿಯಾದ (Team India) ವಿಸ್ಫೋಟಕ ಆಲ್‌ರೌಂಡರ್‌ ಶಿವಂ ದುಬೆ (Shivam Dube) ಮತ್ತೆ ಲಕ್ಕಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಹೌದು. ಇಲ್ಲಿಯವರೆಗೆ ಶಿವಂ ದುಬೆ ಇಲ್ಲಿಯವರೆಗೆ ಯಾವ ಫೈನಲ್‌ ಪಂದ್ಯ ಆಡಿದ್ದಾರೋ ಆ ಎಲ್ಲಾ ಪಂದ್ಯಗಳನ್ನು ಭಾರತ (Team India) ಜಯಗಳಿಸಿದ್ದು ವಿಶೇಷ.

2023 – ಐಪಿಎಲ್‌ನಲ್ಲಿ ಗುಜರಾತ್‌ ಜೈಂಟ್ಸ್‌ ಸೋಲಿಸಿ ಚೆನ್ನೈ 5ನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ಪಂದ್ಯದಲ್ಲಿ ಶಿವಂ ದುಬೆ ಅಜೇಯ 32 ರನ್‌(21 ಎಸೆತ) ಹೊಡೆದಿದ್ದರು. ಇದನ್ನೂ ಓದಿ: 4 ವಿಶ್ವದಾಖಲೆಯೊಂದಿಗೆ ವಿಶ್ವಚಾಂಪಿಯನ್‌ – ಇತಿಹಾಸ ಬರೆದ ಟೀಂ ಇಂಡಿಯಾ

2024 – ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ಎರಡನೇ ಬಾರಿ ಟಿ20 ಟ್ರೋಫಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ದುಬೆ 27 ರನ್‌(16 ಎಸೆತ) ಚಚ್ಚಿದ್ದರು. ಇದನ್ನೂ ಓದಿ: ಫೈನಲಿನಲ್ಲಿ ಅಬ್ಬರಿಸಿ ಸ್ಫೋಟಕ ಬ್ಯಾಟಿಂಗ್‌ – ವಿಶ್ವದಾಖಲೆ ಬರೆದ ಅಭಿಷೇಕ್‌ ಶರ್ಮಾ

2025 – ಪಾಕಿಸ್ತಾನದ ವಿರುದ್ಧ ಫೈನಲ್‌ ಗೆದ್ದು ಭಾರತ ಒಂಭತ್ತನೇ ಬಾರಿ ಏಷ್ಯಾ ಕಪ್‌ ಗೆದ್ದುಕೊಂಡಿತ್ತು. ಶಿವಂ ದುಬೆ 33 ರನ್‌(17 ಎಸೆತ) ಹೊಡೆದಿದ್ದರು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – 255 ರನ್‌ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ

2026 – ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 3ನೇ ಬಾರಿ ಟಿ20 ವಿಶ್ವಕಪ್‌ ಜಯಿಸಿದೆ. ಇಂದಿನ ಪಂದ್ಯದಲ್ಲಿ ದುಬೆ ಅಜೇಯ 26 ರನ್‌(8 ಎಸೆತ, 3 ಬೌಂಡರಿ, 2 ಸಿಕ್ಸ್‌)  ಚಚ್ಚಿದ್ದರು.

ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 17 ಎಸೆತಗಳಲ್ಲಿ 27 ರನ್‌ ಹೊಡೆದಿದ್ದರು. ವೆಸ್ಟ್‌ ಇಂಡೀಸ್‌ ವಿರುದ್ಧ ಸೂಪರ್‌ 8 ಪಂದ್ಯದಲ್ಲಿ ಸತತ ಎರಡು ಬೌಂಡರಿ ಹೊಡೆದು ಪಂದ್ಯವನ್ನು ಭಾರತದ ಕಡೆ ವಾಲಿಸಿದ್ದರು. ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ 43 ರನ್‌(25 ಎಸೆತ, 1 ಬೌಂಡರಿ, 4 ಸಿಕ್ಸ್‌) ಹೊಡೆದಿದ್ದರು.

Share This Article