ಕಾಂಗ್ರೆಸ್ ನಾಯಕರೆಲ್ಲ ಬೇಲ್ ಮೇಲೆ ಇದ್ದಾರೆ: ಸುನೀಲ್ ಕುಮಾರ್

Public TV
2 Min Read

ದಾವಣಗೆರೆ: ಕಾಂಗ್ರೆಸ್ ಪಕ್ಷ ನಾಯಕರಿಲ್ಲದೆ ಅನಾಥವಾಗಿದೆ. ಅಲ್ಲಿ ಕಾರ್ಯಕರ್ತರು, ನಾಯಕರು ಎಲ್ರೂ ಅನಾಥರು. ಕಾಂಗ್ರೆಸ್ ನಾಯಕರೆಲ್ಲ ಬೇಲ್ ಮೇಲೆ ಇದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ರಾಜ್ಯದ ಜನರಿಗೆ ಭರವಸೆ ಇದ್ದರೆ ಅದು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಮೇಲೆ ಮಾತ್ರ. ಕಾಂಗ್ರೆಸ್ ಹತ್ತು ಸುಳ್ಳು ಹೇಳಿ ನಿಜ ಮಾಡಲು ಹೋಗುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರಿಗಳು ಜಾಮೀನಿನ ಮೇಲೆ ಇದ್ದವರು. ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು, ರಾಜ್ಯ ಅಧ್ಯಕ್ಷರವರೆಗೂ ಬೇಲ್ ಮೇಲೆ ಇದ್ದಾರೆ. ಅವರು ನಮ್ಮ ಮೇಲೆ ಅರೋಪ ಮಾಡ್ತಾರೆ ಎಂದರೆ ನೀವೇ ಯೋಚಿಸಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕರಿಯಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ

ಸಚಿವ ಸಂಪುಟದ ವಿಸ್ತರಣೆ ಪುನರಾಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಒಳಿತಾಗುವ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ದೂರದೃಷ್ಟಿ ಇಟ್ಟುಕೊಂಡ ನಾಯಕರು ಯಾವ ಸಮಯಕ್ಕೆ, ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ಕೊಟ್ಟರು.

ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಪಕ್ಷ ಹಾಗೂ ಕಾರ್ಯಕರ್ತರು ನನ್ನನ್ನು ಚುನಾವಣೆಗೆ ನಿಲ್ಲಿಸಿ ಸಚಿವರನ್ನಾಗಿ ಮಾಡಿದೆ. ಮುಂದೆ ಕೂಡ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಸಿದ್ಧರಿದ್ದೇವೆ. ಇದರಲ್ಲಿ ಬೇರೆ-ಬೇರೆ ವಿಚಾರ ಪ್ರಸ್ತಾಪ ಇಲ್ಲ. ಸಚಿವ ಸ್ಥಾನಕ್ಕೆ 60,100 ಕೋಟಿ ನೀಡುತ್ತಿದ್ದಾರೆ ಎನ್ನುವ ಹೇಳಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಅವರು ಪಕ್ಷ ನಮಗೆ ಕೊಟ್ಟಿದೆ ವಿನಃ ನಾವು ಪಕ್ಷಕ್ಕೆ ಏನು ಕೊಟ್ಟಿಲ್ಲ, ಪಕ್ಷದಲ್ಲಿ ವಿಚಾರಕ್ಕೆ ಆದ್ಯತೆ ವಿನಃ, ಹಣಕ್ಕೆ ಆದ್ಯತೆ ಇಲ್ಲ ಎಂದು ತಿಳಿಸಿದರು.

ಶಾಸಕ ಯತ್ನಾಳ್ ಹಣಕೊಡುವ ಬಗ್ಗೆ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಹೇಳಿದ್ದಾರೆ ಎಂದ್ರೇ ಅದು ಸಾರ್ವತ್ರಿಕ ಆಗಲ್ಲ. ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ನಾವು ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೃಷ್ಣಮೃಗ ಬೇಟೆಗಾರರಿಂದ 3 ಪೊಲೀಸರ ಹತ್ಯೆ – 1 ಕೋಟಿ ರೂ. ಪರಿಹಾರ ಫೋಷಿಸಿದ ಸಿಎಂ 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದ ನಿರಂತರ ಜ್ಯೋತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪೀಡರ್‌ಗಳಲ್ಲಿ ತನಿಖೆ ನಡೆಸಿದ್ದೇವೆ. ಅದು ಸಮಾಧಾನ ತಂದಿಲ್ಲ. ಉಳಿದ 29 ಪೀಡರ್‌ಗಳ ತನಿಖೆ ಮಾಡುವುದಕ್ಕೆ ಆದೇಶಿಸಿದ್ದೇನೆ. ನಿರಂತರ ಜ್ಯೋತಿ ಅಕ್ರಮ ಪ್ರಕರಣದಲ್ಲಿ ಯಾರನ್ನು ರಕ್ಷಿಸುವುದಿಲ್ಲ. ನಾನು ಇಲಾಖೆ ಸಚಿವನಾದ ಮೇಲೆ 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇನೆ. ಅದೇ ರೀತಿ ಹರಿಹರದಲ್ಲಿ ಸಮಗ್ರ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *