ಚಾಮರಾಜನಗರ: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanur) ತಾಲೂಕಿನ ಸುಳ್ವಾಡಿ ವಿಷಪ್ರಸಾದ ದುರಂತದ (Sulvadi Poison Case) ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಈಗಾಗಲೇ ಹೈಕೋರ್ಟ್ ಜಾಮೀನು ನೀಡಿದೆ. ಅನಾರೋಗ್ಯದ ಹಿನ್ನಲೆ ಜಾಮೀನು ನೀಡಲಾಗಿದೆ. ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ಮಾದೇಶ ಹಾಗು ನಾಲ್ಕನೇ ಆರೋಪಿ ದೊಡ್ಡಯ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಕ್ರೂಸರ್, ಕ್ಯಾಂಟರ್ ನಡುವೆ ಡಿಕ್ಕಿ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು
ಆದರೆ ಜಿಲ್ಲಾ ನ್ಯಾಯಾಲಯ ಇವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಮೊದಲ ಆರೋಪಿಗೆ ಜಾಮೀನು ಕೊಟ್ಟ ಬಳಿಕ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಮೆಟ್ರೋ ಪ್ರಯಾಣ ದರ 5% ಏರಿಕೆ – ಫೆ.9 ರಿಂದ ಜಾರಿ

