ಜನಗಣತಿಗೆ ಗೈರಾದ್ರೆ ಕಠಿಣ ಕ್ರಮ – 1 ಸಾವಿರ ದಂಡದೊಂದಿಗೆ 3 ವರ್ಷ ಜೈಲು

1 Min Read

ಬೆಂಗಳೂರು: ಜನಗಣತಿಗೆ (Census) ಗೈರಾದ್ರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಬಿಎ ಖಡಕ್ ಎಚ್ಚರಿಕೆ ನೀಡಿದೆ.

ಗೈರುಹಾಜರಾತಿಗೆ ಜಿಬಿಎಯಿಂದ 1,000 ರೂ ದಂಡ ಜೊತೆಗೆ 3 ವರ್ಷ ಕಾರಾಗೃಹ ಶಿಕ್ಷೆ ಎಂದು ಎಚ್ಚರಿಸಿದೆ. ಅಗತ್ಯವಿದ್ದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಧಿಕಾರಿಗಳಿಗೆ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇವರಿಗೆ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿರಬೇಕು, ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್, ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ: ಮೋದಿ ಆಕ್ರೋಶ

ಗಣತಿಗೆ ನಿಯೋಜಿಸಲ್ಪಟ್ಟಿರುವ ಗಣತಿ ಬ್ಲಾಕ್ ಹಾಗೂ ಸೂಪರ್ವೈಸರ್ ಸರ್ಕಲ್ ಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಗಣತಿದಾರರು ಮತ್ತು ಸೂಪರ್ವೈಸರ್ಗಳ ವಿರುದ್ಧ ಜನಗಣತಿ ಕಾಯ್ದೆಯ 1948ರ ಸೆಕ್ಷನ್ 11ರ ನಿಯಮಗಳ ಪ್ರಕಾರ, ಯಾವುದೇ ಜನಗಣತಿ ಅಧಿಕಾರಿ ಅಥವಾ ಜನಗಣತಿ ಕಾರ್ಯದಲ್ಲಿ ಸಹಾಯ ಮಾಡಲು ಕಾನೂನಿನ ಪ್ರಕಾರ ಕರೆಯಲ್ಪಟ್ಟ ಯಾವುದೇ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲಾಗುವುದಾಗಿ ವಾರ್ನಿಂಗ್ ಮಾಡಿದೆ. ಇದನ್ನೂ ಓದಿ: ಕೈ ಯುವ ನಾಯಕ ಫೈರೋಜ್ ಹತ್ಯೆ| ಮತ್ತೆ ಮೂವರ ಬಂಧನ – ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

ಜನಗಣತಿಗೆ ಗೈರಾದರೆ ಶಿಕ್ಷೆ
* 1000ರೂ ದಂಡ ಜೊತೆಗೆ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ
* ಗೈರುಹಾಜರಾತಿ ಅವಧಿಯನ್ನು ಡೈಸ್-ನಾನ್ ಎಂದು ಪರಿಗಣನೆ
* ಸೇವಾ ನಿಯಮಾವಳಿಯಂತೆ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ
* ಅಗತ್ಯವಿದ್ದಲ್ಲಿ ಮೊಕದ್ದಮೆ ದಾಖಲಿಸುವ ಎಚ್ಚರಿಕೆ

Share This Article