ಹೈದರಾಬಾದ್: ಪತ್ನಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ವಿಷಯ ತಿಳಿದು ಬೇಸತ್ತ ಪತಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.
ವಿನಯ್ ಕುಮಾರ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿನಯ್ ಗೋನೆಗಾಂಡ್ಲಾ ಗ್ರಾಮದ ನಿವಾಸಿಯಾಗಿದ್ದು, 2017ರ ನವೆಂಬರ್ 1 ರಂದು ಸೌಜನ್ಯ ಜೊತೆ ಮದುವೆಯಾಗಿದ್ದನು. ನಂತರ ಸೌಜನ್ಯಳಿಗೆ ಬೇರೆಯವನ ಜೊತೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದ.
ದಿನನಿತ್ಯ ಇಬ್ಬರ ನಡುವೆ ಜಗಳವಾಗುತ್ತಿದ್ದ ಕಾರಣ ವಿನಯ್ ಪತ್ನಿ ಕೆಲವು ತಿಂಗಳ ಹಿಂದೆ ತನ್ನ ತವರು ಮನೆಯನ್ನು ಸೇರಿದ್ದಳು. ನಂತರ ಸೌಜನ್ಯ ಅವರ ಪೋಷಕರು ವಿಜಯ್‍ಗೆ ಕರೆ ಮಾಡಿ ಆಕೆಯ ಆರೋಗ್ಯ ಸರಿಯಿಲ್ಲ ಹಾಗೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಕರೆ ಮಾಡಿದ್ದಾರೆ.
ತನ್ನ ಪತ್ನಿ ಸೌಜನ್ಯಳನ್ನು ನೋಡಲು ವಿನಯ್ ತನ್ನ ಸಹೋದರ ವಂಶಿಕೃಷ್ಣ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಆಗ ವಿನಯ್ ಹಾಗೂ ಸೌಜನ್ಯ ನಡುವೆ ಮತ್ತೆ ಜಗಳ ನಡೆದಿದೆ. ಜಗಳವಾಡಿದ ನಂತರ ವಿನಯ್ ಕರ್ನೂಲ್ ಹೊರವಲಯದಲ್ಲಿರುವ ಮಧುನಗರದ ಕಾರ್ಬೈಡ್ ಫ್ಯಾಕ್ಟರಿಗೆ ಹೋಗಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈಲ್ವೇ ಸಿಬ್ಬಂದಿ ಮೃತದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.