ಚಿಕ್ಕಮಗಳೂರಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

By
1 Min Read

ಚಿಕ್ಕಮಗಳೂರು: ಮೈಸೂರಿನ ಉದಯಗಿರಿ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲೂ (Chikkamagaluru) ಕಲ್ಲುತೂರಾಟದ ಘಟನೆ ನಡೆದಿದೆ.

ನಗರದ ವಿಜಯಪುರ ಬಡಾವಣೆಯಲ್ಲಿರುವ ಮನೆಗಳ ಮೇಲೆ ಕೆಲ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಅನ್ಯಕೋಮಿನ ಯುವಕರು ಶುಕ್ರವಾರ ಉಪವಾಸದ ಹಬ್ಬ ಮುಗಿಸಿ, ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದಾರೆ.

ಮಹೇಶ್ ಎನ್ನುವರ ಮನೆ ಮೇಲೆ ತಡ ರಾತ್ರಿ ಕಲ್ಲು ತೂರಾಟ ನಡೆಸಿ, ಘೋಷಣೆ ಕೂಗಿ ಪರಾರಿಯಾಗಿದ್ದಾರೆ. ಕಲ್ಲು ತೂರಾಟದಿಂದ ಮನೆಯ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ.

ಮನೆ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಸವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share This Article