ಮತ್ತೆ ಶುರುವಾಯ್ತು ಜಹಾಗೀರ್‌ಪುರಿಯಲ್ಲಿ ಕಲ್ಲು ತೂರಾಟ – ವಾಹನಗಳು ಧ್ವಂಸ

Public TV
1 Min Read

ನವವೆಹಲಿ: ಏಪ್ರಿಲ್ ತಿಂಗಳ ರಾಮನವಮಿ ಸಂದರ್ಭ ಎರಡು ಸಮುದಾಯಗಳ ನಡುವೆ ಭುಗಿಲೆದ್ದಿದ್ದ ಸಂಘರ್ಷ ಮತ್ತೆ ಪ್ರಾರಂಭವಾಗಿದೆ. ದೆಹಲಿಯ ಜಹಾಂಗೀರ್‌ಪುರಿಯ ಜೆ ಬ್ಲಾಕ್‌ನಲ್ಲಿ ಮಂಗಳವಾರ ರಾತ್ರಿ ಮತ್ತೆ ಕಲ್ಲು ತೂರಾಟ ನಡೆದಿದ್ದು, ಜನರಲ್ಲಿ ಭೀತಿ ಹೆಚ್ಚಿಸಿದೆ.

ವರದಿಗಳ ಪ್ರಕಾರ ಮಂಗಳವಾರ ರಾತ್ರಿ 2 ಗೂಂಪುಗಳ ನಡುವೆ ವಾಗ್ವಾದ ನಡೆದು, ದೊಡ್ಡ ಜಗಳವೇ ಏರ್ಪಟ್ಟಿತು. ಬಳಿಕ ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ಪ್ರಾರಂಭಿಸಿದರು. ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನರು ಕಲ್ಲು ತೂರಾಟ ನಡೆಸುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೆಕ್ಸಿಕೋ ರಸ್ತೆಯಲ್ಲಿ ಗುಂಡಿನ ದಾಳಿ- 5 ವಿದ್ಯಾರ್ಥಿಗಳು ಸೇರಿ 6 ಜನರ ಹತ್ಯೆ

ಘಟನೆಯಲ್ಲಿ ಹಲವು ವಾಹನಗಳು ಧ್ವಂಸಗೊಂಡಿದ್ದು, ಸಂಘರ್ಷವನ್ನು ಹತೋಟಿಗೆ ತರಲು ತಕ್ಷಣವೇ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಶಾಲ್ ಹಾಗೂ ವೀರುನನ್ನು ಪೊಲೀಸರು ಬಂಧಿಸಿದ್ದು, ಶೀಘ್ರದಲ್ಲೇ ಇತರರನ್ನೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಡಿಸಿಪಿ ಉಷಾ ರಂಗಣ್ಣಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸರ ತಂಡವನ್ನು ಕಳುಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *