ಕುಡಿಯೋಕೆ ಹಣ ಕೊಟ್ಟಿಲ್ಲವೆಂದು ಕೊಲೆ- ಚಪ್ಪಲಿ ಕೊಟ್ಟಿತ್ತು ಹಂತಕರ ಸುಳಿವು

Public TV
1 Min Read

ಕಲಬುರಗಿ: ಕೊಲೆ ಮಾಡಿ ಪರರಿಯಾದ ಹಂತಕರ ಸುಳಿವನ್ನು ಚಪ್ಪಲಿಯೊಂದು ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಆರೋಪಿಗಳನ್ನು ಜಿತೇಶ್, ಕೇವಲ ಹಾಗೂ ಪ್ರೇಮ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಚಪ್ಪಲಿ ಬಿಟ್ಟು ಹೋಗಿ ಲಾಕ್ ಇದೀಗ ಇವರು ಆಗಿದ್ದಾರೆ. ಈ ಮೂವರು ಆರೋಪಿಗಳನ್ನು ಎಮ್ ಬಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕುಡಿಯೋಕೆ ದುಡ್ಡು ಕೊಟ್ಟಿಲ್ಲ ಅಂತಾ ಮಹಮದ್ ಕರೀಮ್‍ನನ್ನ ಕೊಲೆ ಮಾಡಿದ್ದರು. ಇದನ್ನೂ ಓದಿ: ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

ಜೂನ್ 11 ರಂದು ಗುಬ್ಬಿ ಕಾಲೋನಿಯ ಕೋಸಗಿ ಲೇಔಟ್ ನಲ್ಲಿ ಮಹಮದ್ ಕರೀಂ ನನ್ನ ಕೊಲೆ ಮಾಡಲಾಗಿತ್ತು. ಜೂನ್ 10 ರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಜಿತೇಶ್, ಕೇವಲ ಹಾಗೂ ಪ್ರೇಮ್ ಮತ್ತೆ ಕುಡಿಯೋಕೆ ಹಣ ಇಲ್ಲದೆ ಇದ್ದಾಗ ರಸ್ತೆಯಲ್ಲಿ ಹೋಗುವವರ ಬಳಿ ಸುಲಿಗೆ ಮಾಡೋದಕ್ಕೆ ಮುಂದಾಗಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಮೊಹಮ್ಮದ್ ಕರೀಂನನ್ನ ಹಿಡಿದು ಹಣ ನೀಡುವಂತೆ ಪೀಡಿಸಿದ್ದಾರೆ. ಹಣ ಕೊಡದೆ ಇದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು.

ಕೊಲೆ ಮಾಡಿದ ಬಳಿಕ ಹಂತಕ ಜಿತೇಶ್ ಚಪ್ಪಲಿ ಶವದ ಪಕ್ಕದಲ್ಲೇ ಬಿಟ್ಟು ಹೋಗಿದ್ದ. ಅಪರಿಚಿತ ಶವದ ಪತ್ತೆಗಾಗಿ ಹುಡುಕಾಡುವಾಗ ಹಂತಕರು ಸುಳಿವನ್ನು ಚಪ್ಪಲಿ ನೀಡಿದೆ. ಕೊಲೆಯ ಹಿಂದಿನ ದಿನ ಬಾರ್ ವೊಂದರಲ್ಲಿ ಜಿತೇಶ್ ಚಪ್ಪಲಿ ಧರಿಸಿ ಹೋಗಿದ್ದನು. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ

ಕೊಲೆಯ ಬಳಿಕ ಸಿಸಿಟವಿ ದೃಶ್ಯ ಪರಿಶೀಲಿಸುವ ವೇಳೆ ಕೊಲೆಯಾದ ಸ್ಥಳದಲ್ಲಿ ಸಿಕ್ಕ ಚಪ್ಪಲಿ ಧರಿಸಿ ಬಾರ್ ಒಳಗೆ ಹೋಗುತ್ತಿರುವ ವ್ಯಕ್ತಿಯ ಚಹರೆ ಗುರುತು ಹಿಡಿದು ಆರೋಪಿಗಳನ್ನು ಬಂಧಿಸಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *