ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋಗಳು AI ಅಲ್ಲ, ಅಸಲಿ ಅಂತ SITಯಿಂದ ರಿಪೋರ್ಟ್

1 Min Read

ಬೆಂಗಳೂರು: ಡಿಜಿಪಿ ರಾಮಚಂದ್ರರಾವ್‌ಗೆ (Ramachandra Rao) ಸೇರಿದ ವಿಡಿಯೋಗಳು ವೈರಲ್ ಪ್ರಕರಣ ಸಂಬಂಧ ಎಸ್‌ಐಟಿ (SIT) ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ 100 ಪುಟಗಳ ವರದಿ ಸಲ್ಲಿಸಿದ ಎಸ್‌ಐಟಿ, ವಿಡಿಯೋಗಳು ಡೀಪ್‌ಫೇಕ್ ಅಥವಾ ಎಐ ಅಲ್ಲ ಅಂತ ರಿಪೋರ್ಟ್ ನೀಡಲಾಗಿದೆ.

ಎಸ್‌ಐಟಿ ರಿಪೋರ್ಟ್‌ನಲ್ಲಿ ಏನಿದೆ?
* ವಿಡಿಯೋಗಳು ಡೀಪ್‌ಫೇಕ್‌ ಅಥವಾ ಎಐ ಸೃಷ್ಟಿಯಲ್ಲ
* ವಿಡಿಯೋಗಳಲ್ಲಿನ ಯಾವುದೇ ದೃಶ್ಯಾವಳಿಯನ್ನು ತಿರುಚಿಲ್ಲ
* ಮಹಿಳೆಯರು ಹಲವು ಬಾರಿ ರಾಮಚಂದ್ರರಾವ್‌ರ ಕಚೇರಿಗೆ ಬಂದು ಹೋಗಿದ್ದಾರೆ
* ಜಾಲತಾಣದಲ್ಲಿ ವೈರಲ್‌ ಆಗಿದ್ದ ವಿಡಿಯೋಗಳನ್ನು ಎಸ್‌ಐಟಿ, ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು
* ಪರಿಶೀಲನೆಯಲ್ಲಿ ಈ ವಿಡಿಯೋಗಳು ಡೀಫ್‌ಫೇಕ್‌ ಅಥವಾ ಎಐ ಸೃಷ್ಟಿಯಲ್ಲ ಅನ್ನೋದು ಬೆಳಕಿಗೆ
* ರಾಮಚಂದ್ರರಾವ್‌ 2016-17ರ ಅವಧಿಯಲ್ಲಿ ಬೆಳಗಾವಿ ಐಜಿಪಿಯಾಗಿದ್ದಾಗಿನ ವಿಡಿಯೋಗಳಿವು
* ಐಜಿಪಿ ಕಚೇರಿಯಲ್ಲೇ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ
* ಕೆಲಸ ಮಾಡ್ತಿರುವ ಚಾಲಕರು, ಸಿಬ್ಬಂದಿಯಿಂದ ವಿಡಿಯೋದಲ್ಲಿರುವ ಇಬ್ಬರು ಮಹಿಳೆಯರನ್ನು ಗುರುತು ಪತ್ತೆ
* ಆ ಮಹಿಳೆಯರು ಹಲವು ಬಾರಿ ರಾಮಚಂದ್ರರಾವ್‌ರ ಕಚೇರಿಗೆ ಬಂದು ಹೋಗಿದ್ದ ಬಗ್ಗೆ ಮಾಹಿತಿ
* ಮಹಿಳೆಯರ ಪೈಕಿ ಒಬ್ಬ ಮಹಿಳೆ ತನ್ನ ಮೊಬೈಲ್‌ನಲ್ಲಿ ಉದ್ದೇಶಪೂರ್ವಕವಾಗಿ ವಿಡಿಯೋ ರೆಕಾರ್ಡ್
* ವಿಡಿಯೋ ವೈರಲ್ ಆಗ್ತಿದ್ದಂತೆ ಇಬ್ಬರೂ ಮಹಿಳೆಯರು ದಿಢೀರ್‌ ನಾಪತ್ತೆ
* ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ
* ತನಿಖೆಗಾಗಿ ಮಹಿಳೆಯರ ಹೇಳಿಕೆ ನಿರ್ಣಾಯಕವಾಗಿದೆ
* ಮಹಿಳೆಯರ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ
* ರಾಮಚಂದ್ರರಾವ್ ಆರೋಪಿಸಿದಂತೆ ವಿಡಿಯೋಗಳು ಎಐ ಅಥವಾ ಡೀಪ್‌ಫೇಕ್ ವಿಡಿಯೋಗಳಲ್ಲ
* ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದಲ್ಲಿ ನಾಲ್ವರು ಐಪಿಎಸ್‌ ಅಧಿಕಾರಿಗಳ ತಂಡದಿಂದ ರಿಪೋರ್ಟ್

Share This Article