ನಾನು ಕೋಲಾರ ಕೂಡ ಕೇಳಿದ್ದೇನೆ- ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ನಾನು ಕೋಲಾರ (Kolar) ಮತ್ತು ವರುಣಾದಲ್ಲಿ (Varuna) ನಿಂತುಕೊಳ್ಳುತ್ತೇನೆ ಎಂದಿದ್ದೆ. ಆದರೆ ಹೈಕಮಾಂಡ್ ವರುಣಾದಲ್ಲಿ ನಿಲ್ಲಿ ಎಂದಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ಅವರು ಒಪ್ಪಿದರೆ ಎರಡೂ ಕಡೆಗಳಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೇ ಪಟ್ಟಿ ಬಿಡುಗಡೆ ಆಗಿದೆ. ಒಂದೇ ಅಪ್ಲಿಕೇಷನ್ ಇದ್ದು ಯಾವುದೇ ಗೊಂದಲವಿಲ್ಲದ ಕ್ಷೇತ್ರಗಳನ್ನು ಹೈಕಮಾಂಡ್ ಅವರು ಒಪ್ಪಿ ಬಿಡುಗಡೆ ಮಾಡಿದ್ದಾರೆ. ಯಾಕೆಂದರೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಮೀಟಿಂಗ್ ಆಗಿತ್ತು. ಅಲ್ಲದೇ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಕೂಡಾ ನಡೆದಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ಏನು ಚರ್ಚೆಗಳಾಗಿದ್ದವೋ ಅದು ಸೆಂಟ್ರಲ್ ಕಮಿಟಿಯಲ್ಲಿ ಚರ್ಚೆಯಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ – ವಯನಾಡಿನಲ್ಲಿ ಬ್ಲ್ಯಾಕ್ ಡೇ ಆಚರಣೆ 

ಆರು ಶಾಸಕರ ಟಿಕೆಟ್ ಬಿಡುಗಡೆ ಆಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಪಟ್ಟಿ ಬಿಡುಗಡೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಅದು ಬಿಡುಗಡೆ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಸಂವಿಧಾನಬಾಹಿರ: ಶರದ್ ಪವಾರ್

ಟಿಕೆಟ್ ಅನೌನ್ಸ್ ಮಾಡಲು ಸರ್ವೆ ರಿಪೋರ್ಟನ್ನು ಮಾನದಂಡವಾಗಿ ಇಟ್ಟುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ವೆ ಮಾನದಂಡ ಅಲ್ಲ. ಕಾರ್ಯಕರ್ತರ ಅಭಿಪ್ರಾಯ ಇಲ್ಲಿ ಮುಖ್ಯವಾಗುತ್ತದೆ. ಕಾರ್ಯಾಧ್ಯಕ್ಷರು, ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯಗಳನ್ನು ಕೇಳಿ ಯಾರು ಉತ್ತಮ ಅಭ್ಯರ್ಥಿ ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್? 

ರಾಹುಲ್ ಗಾಂಧಿ‌ (Rahul Gandhi) ಅನರ್ಹತೆ ಕುರಿತು ಮಾತನಾಡಿದ ಅವರು, ಇದೊಂದು ಕರಾಳದಿನ. ಮಾನನಷ್ಟ ಮೊಕ್ಕದ್ದಮ್ಮೆ (Defamation) ಪ್ರಕರಣದಡಿಯಲ್ಲಿ ಸ್ವತಂತ್ರ ಭಾರತದಲ್ಲಿ ಇಲ್ಲಿಯವರೆಗೆ ಯಾರಿಗೆ 2 ವರ್ಷ ಶಿಕ್ಷೆ ವಿಧಿಸಿದೆ? ಅವರಿಗೆ ರಾಹುಲ್ ಗಾಂಧಿಯವರ ಭಯವಿದೆ. ಅದಕ್ಕೆ ಅವರನ್ನು ಮುಗಿಸಲು ಹೊರಟಿದ್ದಾರೆ. ಅವರ ಹೆಸರು ಮತ್ತು ವ್ಯಕ್ತಿತ್ವವನ್ನು ಹಾಳು ಮಾಡಲು ಬಿಜೆಪಿ (BJP) ಹೊರಟಿದೆ. ಯಾವ ಕೋರ್ಟ್ ಅವರಿಗೆ ಅಪರಾಧದ ಶಿಕ್ಷೆ ನೀಡಿದೆಯೋ ಅದೇ ಕೋರ್ಟ್ ಅವರಿಗೆ ಒಂದು ತಿಂಗಳು ಸಮಯ ಕೂಡ ಕೊಟ್ಟಿದೆ. ತರಾತುರಿಯಲ್ಲಿ ಅವರನ್ನು ಅನರ್ಹ ಮಾಡಬೇಕಾದ ಅಗತ್ಯವೇನಿತ್ತು? ಭಾರತ್ ಜೋಡೋ ಯಾತ್ರೆಯಿಂದ (Bharath Jodo Yatra) ರಾಹುಲ್ ಗಾಂಧಿಯವರಿಗೆ ಒಳ್ಳೆಯ ವರ್ಚಸ್ಸಿತ್ತು. ಈ ಯಶಸ್ಸನ್ನು ಬಿಜೆಪಿಯವರಿಗೆ ತಡೆಯಲಾಗಲಿಲ್ಲ. ಈ ಅನರ್ಹತೆಯಿಂದ ರಾಹುಲ್ ಗಾಂಧಿ ಮತ್ತಷ್ಟು ಪಾಪ್ಯುಲರ್ ಆಗುತ್ತಾರೆ. ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ತಿಳಿದುಕೊಂಡಿದ್ದರೆ ಅವರು ಮೂರ್ಖರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

Share This Article
Leave a Comment

Leave a Reply

Your email address will not be published. Required fields are marked *