ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಸೆಕ್ಯುರಿಟಿ ಗಾರ್ಡ್ ಹಿಡಿದುಕೊಳ್ಳದೇ ಹೋಗಿದ್ದರೂ ಜನರೇ ಆತನನ್ನ ಸಾಯಿಸುತ್ತಿದ್ದರು. ಗೋಡ್ಸೆ ಒಬ್ಬ ಹಿಂದೂ ಮತಾಂಧ.‌ ಭಾರತ ವಿಭಜನೆ ಸಮಯದಲ್ಲಿ ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು, ಬಳಿಕ ಗಂಡಂದಿರನ್ನು ಕೊಲ್ಲುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವ್ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಿರಲಿಲ್ಲ. ಅಧಿಕಾರವನ್ನು ಅನುಭವಿಸಬೇಕು ಅಂತ ಹಿರಿಯರು ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. ಸ್ವಾರ್ಥಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. ಗುಲಾಮಗಿರಿಯಿಂದ ಮುಕ್ತಿ ಸಿಗಬೇಕು ಅಂತ ಹೋರಾಟ ಮಾಡಿದರು. ಜಗತ್ತಿನ ಯಾವ ದೇಶದಲ್ಲೂ ಕೂಡ ಅಹಿಂಸಾತ್ಮಕ ಹೋರಾಟ ನಡೆದಿಲ್ಲ. ಗಾಂಧೀಜಿಯವರು ಅಹಿಂಸಾತ್ಮಕವಾಗಿ ದೀರ್ಘ ಕಾಲವಾದರು ಸ್ವಾತಂತ್ರ್ಯ ತಂದುಕೊಟ್ಟರು. ದ್ವೇಷ ಸಾಧನೆ ಮಾಡಲು ಗಾಂಧಿಯನ್ನು ಹತ್ಯೆ ಮಾಡಲಾಯ್ತು. ಹಿಂದೂ ಅಲ್ಲದೆ ಬೇರೆ ಧರ್ಮದವರು ಹತ್ಯೆ ಮಾಡಿದ್ರೆ ಅದು ಬೇರೆಯೇ ಕಥೆ ಆಗುತ್ತಿತ್ತು. ಭಾರತ ವಿಭಜನೆ ಸಮಯದಲ್ಲಿ ಲಾಹೋರ್ ಸೇರಿದಂತೆ ಅನೇಕ ಕಡೆ ಅಮಾನವೀಯ ಘಟಕಗಳು ನಡೆದಿದೆ. ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು. ಬಳಿಕ ಗಂಡಂದಿರನ್ನು ಕೊಲ್ಲುತ್ತಿದ್ದರು ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

ಗಾಂಧೀಜಿಯವರಿಗೆ ಅವ್ರೇ ಸಾಟಿ. ಸ್ವಾರ್ಥ ಇಲ್ಲದೆ ಹೋರಾಟ ಮಾಡಿದವರು ಗಾಂಧೀಜಿ. ಇದಕ್ಕಾಗಿ ತನ್ನ ಪ್ರಾಣವನ್ನೆ ಗಾಂಧೀಜಿ ಕಳೆದುಕೊಂಡರು. ಸಂಚು ಮಾಡಿ ಪ್ರಾರ್ಥನೆ ಸಮಯದಲ್ಲಿ ಗೋಡ್ಸೆ ಅಂಡ್ ಟೀಂ ಗಾಂಧಿಯವರನ್ನು ಹತ್ಯೆ ಮಾಡ್ತಾರೆ. ಗಾಂಧಿ ಕೊಲ್ಲಲು ಗೋಡ್ಸೆ ಅಂಡ್ ಟೀಂ ಪಿಸ್ತೂಲ್ ಖರೀದಿ ಮಾಡಿ ಪ್ಲಾನ್ ಮಾಡಿಕೊಂಡು ಗೋಡ್ಸೆ 3 ಗುಂಡು ಹೊಡೆದು ಹತ್ಯೆ ಮಾಡ್ತಾರೆ. ಗಾಂಧಿ ಹೇ ರಾಮ್ ಅಂತ ಬಿದ್ದು ಹೋಗ್ತಾರೆ ಎಂದು ಗಾಂಧಿಯನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

ಗಾಂಧೀಜಿ “ಆರ್ಮಿ ಆಫ್ ಪೀಸ್” ಅಂತ ಬ್ರಿಟಿಷ್ ವೈಸರಾಯ್ ಹೇಳಿದ್ರು. ಇಡೀ ವಿಶ್ವದಲ್ಲೇ ಒಬ್ಬ ವ್ಯಕ್ತಿಗೆ ಯಾರಾದ್ರು ಗೌರವ ಕೊಡುತ್ತಾರೆ ಅಂದ್ರೆ ಅದು ಗಾಂಧೀಜಿಗೆ ಮಾತ್ರ. ಗಾಂಧೀಜಿ ಬದುಕಿದ್ರೆ ಭಾರತದ ಚಿತ್ರಣ ಮತ್ತಷ್ಟು ಬದಲಾವಣೆ ಆಗುತ್ತಿತ್ತು. 79 ವರ್ಷ ಗಾಂಧೀಜಿ ಬದುಕಿದ್ರು. ಆರೋಗ್ಯ ಇತ್ತು. ಅನೇಕ ವರ್ಷ ಬದುಕುತ್ತಿದ್ದರು, ಅವ್ರಿಗೆ ವಿಲ್ ಪವರ್ ಇತ್ತು. ಗಾಂಧೀಜಿಗೆ ಯುವಕ ಒಬ್ಬ 100 ವರ್ಷ ಬದುಕಿ ಅಂತ ಪತ್ರ ಬರೆದಿದ್ದ. ಆಗ ಗಾಂಧಿ ನಾನು 125 ವರ್ಷ ಬದುಕಬೇಕು ಅಂದು ಕೊಂಡಿದ್ದೇನೆ ಅಂತ ಉತ್ತರ ಬರೆದಿದ್ದರು. ಗಾಂಧೀಜಿ ವಿಚಾರಧಾರೆ ಸ್ವಲ್ಪ ಆದರೂ ಅಳವಡಿಸಿಕೊಳ್ಳಬೇಕು. ಎಲ್ಲಾ ವಿಚಾರಧಾರೆ ಅನುಸರಿಸಲು ಸಾಧ್ಯವಿಲ್ಲ. ಈಗ ನಾವೆಲ್ಲ ಕೆಟ್ಟು ಹೋಗಿದ್ದೇವೆ. ಸ್ವಲ್ಪವಾದ್ರು ಅವರ ವಿಚಾರಧಾರೆ ಅನುಸರಿಸೋದು ನಾವು ಅವರಿಗೆ ಕೊಡುವ ಗೌರವ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *