ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕರ್ನಾಟಕವನ್ನು ಪಾಕಿಸ್ತಾನಕ್ಕಿಂತಲೂ ಕಡೆ ಮಾಡುತ್ತಿದ್ದಾರೆ: ಜೋಶಿ ಕಿಡಿ

Public TV
2 Min Read

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (D.K.Shivakumar) ರಾಜ್ಯವನ್ನು ಪಾಕಿಸ್ತಾನಕ್ಕಿಂತಲೂ ಕಡೆ ಮಾಡುತ್ತಿದ್ದಾರೆ. ನೀವೇನು ಕರ್ನಾಟಕದಲ್ಲಿ ಆಡಳಿತ ಮಾಡುತ್ತಿದ್ದೀರಾ ಅಥವಾ ಇದನ್ನು ಮೂಲಭೂತವಾದಿ ಇಸ್ಲಾಮಿಕ್ ದೇಶ ಅಂದುಕೊಂಡಿದ್ದಾರಾ? ಹನುಮಾನ್ ಚಾಲೀಸಾ ಪಠಣ ಮಾಡಿದವರೇ ಮೇಲೆ ಯಾಕೆ ಎಫ್‌ಐಆರ್ ಹಾಕಿದ್ದೀರಿ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ರಾಜ್ಯದಲ್ಲಿ ತುಷ್ಟೀಕರಣ ರಾಜಕೀಯದ ಪರಾಕಾಷ್ಠೆಯಿದೆ. ರಾಜ್ಯದಲ್ಲಿ ಹನುಮಾನ್ ಚಾಲೀಸಾ ಮಾಡಲು ನಿರ್ಬಂಧ ಇದೆಯಾ? ತುಷ್ಟೀಕರಣ, ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಎಫ್‌ಐಆರ್ ಹಾಕಿದ್ದೀರಿ. ಇದನ್ನು ನಾವು ಸಹಿಸೋದಿಲ್ಲ. ತೀವ್ರವಾಗಿ ಖಂಡನೆ ಮಾಡುತ್ತೇವೆ. ಈ ಕೂಡಲೇ ಎಫ್‌ಐಆರ್ ವಾಪಸ್‌ ಪಡೆಯಬೇಕು ಎಂದರು. ಇದನ್ನೂ ಓದಿ: ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ, ನಾನು ಸಾಯೋವರೆಗೂ ಮೋದಿ ಜೊತೆಗೆ ಇರ್ತೀನಿ: ಈಶ್ವರಪ್ಪ

ಕಾಂಗ್ರೆಸ್ ಮತ್ತು ಸುಳ್ಳು ಎರಡು ಒಂದೇ. 70 ವರ್ಷದಿಂದ ಗರಿಭಿ ಹಠಾವೋ ಅಂದ್ರಿ. ಮತ್ತೆ ಈಗ ಯಾಕೆ ಫ್ರೀ ಕೊಡತ್ತಿದ್ದೀರಿ? ಯಾರಿಗೆ ಫ್ರೀ ಭಾಗ್ಯ. ಏನು ಶ್ರೀಮಂತರಿಗೆ ಕೊಡತ್ತಿದ್ದೀರಾ? ನಿಮಗೆ ನಾಚಿಕೆ ಆಗೋದಿಲ್ವಾ? ನೀವು ಸತ್ಯ ಹರಿಶ್ಚಂದ್ರರಾಗಿದ್ದರೆ, ಜನ ಯಾಕೆ ನಿಮ್ಮನ್ನು ಮೂಲೆಗುಂಪು ಮಾಡತ್ತಾರೆ? ಈ ಹಿಂದೆ ದೇಶದೆಲ್ಲೆಡೆ ಕಾಂಗ್ರೆಸ್ ಇತ್ತು. ಆದರೆ ಹೀಗೆ ಹುಚ್ಚು ಹುಚ್ಚು ಮಾತನಾಡಿದ್ದಕ್ಕೆ ಈ ಪರಿಸ್ಥಿತಿಗೆ ಬಂದಿದೆ ಎಂದು ಕುಟುಕಿದರು.

ರಾಹುಲ್ ಗಾಂಧಿ ಅವರು ಅನಧಿಕೃತವಾಗಿ ರಾತ್ರೋರಾತ್ರಿ ವಿದೇಶಕ್ಕೆ ಹೋಗಿ ಬರ್ತಾರೆ. ದೇಶ ಬಿಡುವಾಗ ಒಬ್ಬ ಸಂಸದ ಸಂಸತ್ತಿಗೆ ತಿಳಿಸಬೇಕು. ಆದರೆ ಅವರು ಹೇಳೋದಿಲ್ಲ. ರಾತ್ರೋರಾತ್ರಿ ಎಲ್ಲಿಗೆ ಓಡಿ ಹೋಗುತ್ತಾರೆ. ಅದು ಕಾಂಗ್ರೆಸ್‌ನವರಿಗೂ ಕೂಡ ಗೊತ್ತಾಗುವುದಿಲ್ಲ. ನೀವು ಗಾಜಿನ ಮನೆಯಲ್ಲಿ ಇದ್ದು ಬೇರೆಯವರಿಗೆ ಕಲ್ಲು ಹೊಡೆಯಬೇಡಿ ಎಂದರು. ಬರ ಪರಿಹಾರದ ಬಗ್ಗೆ ಕಾಂಗ್ರೆಸ್ ನಾಯಕರು ಹಾಕಿರುವ ಸವಾಲು ಸ್ವೀಕಾರ ಮಾಡಿದ ಜೋಶಿ, ನಾವು ಕೂಡ ಬಹಿರಂಗ ಚರ್ಚೆಗೆ ಸಿದ್ಧ. ಬಹಿರಂಗ ಚರ್ಚೆ ಅಂದ್ರೆ ಹೊಡೆದಾಡೋದಾ? ನಮ್ಮ ಪಕ್ಷ ಒಬ್ಬ ಸಾಮಾನ್ಯ ಕಾರ್ಯಕರ್ತ ಸಾಕು. ಕಾಂಗ್ರೆಸ್ ಆರೋಪಕ್ಕೆ ಉತ್ತರ ನೀಡಲು ನೀವು ಯಾವ ಮುಖಂಡರನ್ನು ಸೂಚಿಸುತ್ತೀರಿ, ಅವರನ್ನೇ ಚರ್ಚೆಗೆ ಕಳುಹಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.  ಇದನ್ನೂ ಓದಿ: ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

Share This Article