6 ನಿಮಿಷದ ಕಿರುಚಿತ್ರ ತೋರಿಸಿ, ಪುನೀತ್ ಬ್ಯಾನರ್ ನಲ್ಲಿ ಸಿನಿಮಾ ಮಾಡಿದ ನಿರ್ದೇಶಕಿ

Public TV
1 Min Read

ಪುನೀತ್ ರಾಜ್ ಕುಮಾರ್ ನಿಧನದ ನಂತರ, ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಸಿನಿಮಾ ‘ಆಚಾರ್ ಅಂಡ್ ಕೋ’ ಈ ಸಿನಿಮಾ ಅನೌನ್ಸ್ ಆಗುವ ಮುನ್ನವೇ ಪಬ್ಲಿಕ್ ಟಿವಿ ಡಿಜಿಟಲ್ ಈ ವಿಷಯವನ್ನು ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಸಂಪೂರ್ಣ ಶೂಟಿಂಗ್ ಕೂಡ ಮುಗಿದಿದ್ದು, ಸದ್ಯ ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿದ್ದು, 60 ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಮೈಸೂರಿನಲ್ಲಿ 60ರ ದಶಕದ ಬೆಂಗಳೂರು ಮರುಸೃಷ್ಟಿ ಮಾಡಿ ಬಹುತೇಕ ಅಲ್ಲಿಯೇ ಶೂಟಿಂಗ್ ಮಾಡಿದ್ದಾರಂತೆ. ಇಂಥದ್ದೊಂದು ಅವಕಾಶ ಮಾಡಿಕೊಟ್ಟ ಪುನೀತ್ ಮತ್ತು ಅಶ್ವಿನಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಸಿಂಧು. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

ಪುನೀತ್ ಬ್ಯಾನರ್ ನಲ್ಲಿ ನಿರ್ಮಾಣವಾದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಸಿಂಧು ನಟಿಸಿದ್ದರು. ಅದೇ ವೇಳೆಯಲ್ಲೇ ಆಚಾರ್ ಅಂಡ್ ಕೋ ಸಿನಿಮಾದ ಕಥೆಯನ್ನು ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರಿಗೆ ಹೇಳಿದ್ದರಂತೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವುದನ್ನು ಆರು ನಿಮಿಷದ ಕಿರುಚಿತ್ರ ಮಾಡಿಯೂ ತೋರಿಸಿದ್ದರಂತೆ. ಇದನ್ನು ಕಂಡು ಖುಷಿಯಾದ ಪುನೀತ್, ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾ ಮಾಡಲು ಹೇಳಿದರಂತೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

ಇದೀಗ ಪುನೀತ್ ಅವರ ಆಸೆಯಂತೆ ಸಿನಿಮಾದ ಬಹುತೇಕ ಶೂಟಿಂಗ್ ಅನ್ನು ಪೂರ್ಣಗೊಳಿಸಿರುವ ಸಿಂಧು, ಅಂದುಕೊಂಡಂತೆ ಚಿತ್ರೀಕರಣ ಮಾಡಿದ ಖುಷಿಯಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಬಿಂದು ಮಾಲಿನ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಸುಧಾ ಬೆಳವಾಡಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *