ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

Public TV
1 Min Read

– ಶಿವಣ್ಣನ ಕಾಲು ಮುಟ್ಟಿ ನಮಸ್ಕರಿಸಿದ ಅಭಿಮಾನಿಗಳು
– ಎತ್ತುಗಳಿಗೆ ಬಾಳೆಹಣ್ಣು ತಿನ್ನಿಸಿದ ರಾಘಣ್ಣ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಇಂದಿಗೆ 6 ದಿನಗಳೇ ಕಳೆದು ಹೋಗಿವೆ. ಈಗಲೂ ಸ್ಟಾರ್ ನಟರು ಅಪ್ಪು ಕುಟುಂಬಸ್ಥರು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದರೆ, ಇತ್ತ ಅಭಿಮಾನಿಗಳು ಪುನೀತ್ ಸಮಾಧಿ ಬಳಿ ಜಮಾಯಿಸಿ ದರ್ಶನ ಪಡೆಯುತ್ತಿದ್ದಾರೆ. ಅಂತೆಯೇ ಇದೀಗ ಎತ್ತನ ಗಾಡಿಯಲ್ಲಿ ಬಂದ ಅಭಿಮಾನಿಗಳನ್ನು ಶಿವಣ್ಣ ಹಾಗೂ ರಾಘಣ್ಣ ಭೇಟಿ ಮಾಡಿದ್ದಾರೆ.

ಪಾವಗಡದಿಂದ ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳು ಅಪ್ಪು ಸಮಾಧಿ ಬಳಿ ಕುಳಿತಿದ್ದರು. ಇವತ್ತ ನಮ್ಮ ಜೊತೆ ಅಪ್ಪು ಇಲ್ಲ, ಆದರೆ ನಾವು ಅಪ್ಪುವನ್ನು ಶಿವಣ್ಣನಲ್ಲಿ ಕಾಣುತ್ತೇವೆ ಹೀಗಾಗಿ ಶಿವಣ್ಣನನ್ನು ಬೇಟಿಯಾಗದೆ ಇಲ್ಲಿಂದ ತೆರಳಲ್ಲ ಎಂದು ಹಠಕ್ಕೆ ಬಿದ್ದರು. ಈ ವಿಚಾರವನ್ನು ಮಾಧ್ಯಮಮಿತ್ರರು ಶಿವಣ್ಣ ಬಳೆ ಹೇಳಿದ್ದಾರೆ. ಆಗ ಶಿವಣ್ಣ ಭೇಟಿಯಾಗುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

ಇತ್ತ ಅಭಿಮಾನಿಗಳನ್ನು ಶಿವಣ್ಣ ಹಾಗೂ ರಾಘಣ್ಣ ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಶಿವಣ್ಣ ಕಾಲಿಗೆ ನಮಸ್ಕರಿಸಿದ್ದಾರೆ. ಇತ್ತ ಶಿವಣ್ಣ ಎತ್ತುಗಳನ್ನು ಮುಟ್ಟಿ ನಮಸ್ಕಾರ ಮಾಡಿದರೆ, ರಾಘಣ್ಣ ªಕೂಡ ಮನೆಯಿಂದ ಹೊರಬಂದು ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ. ಅಲ್ಲದೆ ಎತ್ತುಗಳಿಗೆ ಬಾಳೆಹನ್ನು ತಿನ್ನಿಸಿದ್ದಾರೆ.

ಒಟ್ಟಿನಲ್ಲಿ ದೂರದಿಂದ ಬಂದಿದ್ದ ಅಭಿಮಾನಿಗಳನ್ನು ಇಬ್ಬರೂ ಪ್ರೀತಿಯಿಂದಲೇ ಮಾತಾನಾಡಿಸಿ ಕಳುಹಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಅಭಿಮಾನಿಗಳ ಪ್ರೀತಿಗೆ ಏನ್ ಕೊಟ್ರು ಕಮ್ಮಿ. ಅಭಿಮಾನಿಗಳ ಋಣವನ್ನು ತೀರಿಸಲು ಆಗಲ್ಲ. ಎಲ್ಲರಿಗೂ ನೋವಿದ್ದರು ಸಹ ಮನೆ ಬಳಿ ಬರುತ್ತಿದ್ದಾರೆ. ಅದು ನಮಗೆ ಬಂದಿರುವ ವರ ಎಂದಿದ್ದಾರೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

ಅಪ್ಪು ಅಷ್ಟು ಪ್ರೀತಿ ಗಳಿಸಿದ್ದಾನೆ. ದೇವರು ಅಪ್ಪುವನ್ನು ನಮ್ಮಿಂದ ಕಿತ್ತುಕೊಂಡಿದ್ದಾನೆ. ಅಭಿಮಾನಿಗಳ ಜೊತೆ ನಾವು ಯಾವಾಗ್ಲೂ ಇರುತ್ತೇವೆ. ಇಷ್ಟು ಬೇಗ ಅವನನ್ನು ಕಳೆದುಕೊಳ್ಳಬಾರದಿತ್ತು ಎಂದು ಶಿವರಾಜ್ ಕುಮಾರ್ ಗದ್ಗದಿತರಾದರು.

Share This Article
Leave a Comment

Leave a Reply

Your email address will not be published. Required fields are marked *