ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳಲ್ಲ: ಶರದ್ ಪವಾರ್

Public TV
1 Min Read

ಮುಂಬೈ: ಎಐಎಂಐಎಂ ಜೊತೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳಲು ಒಲವು ಹೊಂದಿಲ್ಲ ಎಂದು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಪುಣಾದಲ್ಲಿ ಸ್ಪಷ್ಟ ಪಡಿಸಿದರು.

ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ಶಿವಸೇನೆ ನೇತೃತ್ವದ ತ್ರಿಪಕ್ಷೀಯ ಮಹಾ ವಿಕಾಸ್ ಅಘಾಡಿ(ಎಂವಿಎ) ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾಪಿಸಿತ್ತು. ಈ ಬಗ್ಗೆ ಮಾತನಾಡಿ, ಮೈತ್ರಿಯ ಬಗ್ಗೆ ಇಮ್ತಿಯಾಜ್ ಜಲೀಲ್ ಅವರ ಸಲಹೆಯನ್ನು ಶಿವಸೇನೆ ಈಗಾಗಲೇ ತಿರಸ್ಕರಿಸಿದೆ ಎಂದು ಹೇಳಿದರು.

ಎಐಎಂಐಎಂ ಮೈತ್ರಿ ಬಗ್ಗೆ ಮಾತನಾಡಬಹುದು. ಆದರೆ ಅವರು ಮಾತನಾಡುತ್ತಿರುವ ಪಕ್ಷಗಳು ಅಂತಹ ಪ್ರಸ್ತಾಪವನ್ನು ಮೊದಲು ಒಪ್ಪಿಕೊಳ್ಳಬೇಕು. ಎಐಎಂಐಎಂ ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಲೂ ಪ್ರಸ್ತಾಪಿಸಿದ್ದರೂ, ಅಂತಹ ಮೈತ್ರಿ ರಚನೆಗೆ ರಾಜಕೀಯ ಪಕ್ಷಗಳ ರಾಷ್ಟ್ರೀಯ ಸಮಿತಿಯು ಅನುಮೋದನೆ ನೀಡಬೇಕು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

ಎನ್‍ಸಿಪಿಯು ಶಿವಸೇನೆ ಮತ್ತು ಕಾಂಗ್ರೆಸ್‍ನೊಂದಿಗೆ ಆಡಳಿತಾರೂಢ ಒಕ್ಕೂಟದ ಭಾಗವಾಗಿರುವುದರಿಂದ, ಮೈತ್ರಿಯನ್ನು ವಿಸ್ತರಿಸುವ ಬಗ್ಗೆ ಅದರ ಅಸ್ತಿತ್ವದಲ್ಲಿರುವ ಪಾಲುದಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಪತ್ನಿ ಮಟನ್ ಕರಿ ಮಾಡ್ಲಿಲ್ಲ ಅಂತ ಪೊಲೀಸರಿಗೆ ಟಾರ್ಚರ್ ಕೊಟ್ಟ ವ್ಯಕ್ತಿ

ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಶಿವಸೇನೆ ನೇತೃತ್ವದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಸಮ್ಮಿಶ್ರದೊಂದಿಗೆ ತಮ್ಮ ಪಕ್ಷವು ಮೈತ್ರಿಮಾಡಿಕೊಳ್ಳಬಹುದು ಎಂದು ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *