ಆನೇಕಲ್‌ನಲ್ಲಿ ಸರಣಿ ಅಪಘಾತ – 10ಕ್ಕೂ ಹೆಚ್ಚು ವಾಹನಗಳಿಗೆ ಬೃಹತ್‌ ಕಂಟೈನರ್‌ ಡಿಕ್ಕಿ

1 Min Read

– ಪೊಲೀಸರು 14 ಕಿಮೀ ಚೇಸ್‌ ಮಾಡಿದ್ರೂ ನಿಲ್ಲಿಸಿದ ಚಾಲಕ; ಸಾರ್ವಜನಿಕರಿಂದ ಗೂಸ

ಆನೇಕಲ್‌: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ (Anekal) ಭೀಕರ ಸರಣಿ ಅಪಘಾತ (Serial Accident) ಸಂಭವಿಸಿದೆ. ಬೃಹತ್‌ ಕಂಟೈನರ್‌ವೊಂದು ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರಿಂದ (Surya City Police) 14 ಕಿಮೀ ತಪ್ಪಿಸಿಕೊಂಡು ಹೋಗಿದ್ದ ಲಾರಿ ಚಾಲಕನನ್ನ ಸಾರ್ವನಿಕರೇ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ಮದ್ಯದ ಅಮಲಿನಲ್ಲಿದ್ದ ಅನ್ನೋದು ಗೊತ್ತಾಗಿದೆ. ಬೆಸ್ತಮಾನಹಳ್ಳಿಯಿಂದ ಚಂದಾಪುರದ ಕಡೆಗೆ ಹೊರಟಿದ್ದ ಚಾಲಕ ರಸ್ತೆ ಅಕ್ಕಪಕ್ಕ ಸಿಕ್ಕಸಿಕ್ಕ ವಾಹನಗಳನ್ನೆಲ್ಲ ಗುದ್ದಿಕೊಂಡು ಹೋಗಿದ್ದಾನೆ. ಇದನ್ನೂ ಓದಿ: ರಾಜಣ್ಣ ನನಗೂ ಆಪ್ತರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು: ಡಿಕೆಶಿ

ಪೊಲೀಸರು 14 ಕಿಮೀ ಚೇಸ್‌ ಮಾಡಿದ್ರೂ ವಾಹನ ನಿಲ್ಲಿಸಿದೇ ಹೋಗಿದ್ದಾನೆ. ಕೊನೆಗೆ ಹೊಸೂರು ಹೆದ್ದಾರಿಯ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿ ಲಾರಿ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸುತ್ತಿದ್ದಂತೆ ಚಾಲಕನನ್ನ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ.

ಸದ್ಯ ಲಾರಿ ಚಾಲಕನನ್ನ ವಶಕ್ಕೆ ಪಡೆದಿರುವ ಸೂರ್ಯ ಸಿಟಿ ಪೋಲಿಸರು, ವಿಚಾರಣೆ ನಡೆಸುತ್ತಿದ್ದಾರೆ. ಸರಣಿ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಬಂಧನ ಭೀತಿಯಿಂದ ರಾಜ್ಯದಿಂದ ರಾಜ್ಯಕ್ಕೆ ಬೈರತಿ ಅಜ್ಞಾತ – ಮಾಜಿ ಸಚಿವನಿಗಾಗಿ ಸಿಐಡಿಯ 3 ತಂಡ ತೀವ್ರ ತಲಾಶ್

Share This Article