ಸಕಲೇಶಪುರಸ್ವಾಮಿಯ ದರ್ಶನ ಪಡೆದ ಸುಧಾಮೂರ್ತಿ

1 Min Read

ಹಾಸನ: ಇನ್ಫೋಸಿಸ್ ಸುಧಾಮೂರ್ತಿಯವರು (Infosys Sudhamurthy) ಸಕಲೇಶಪುರದ ಸಕಲೇಶಪುರಸ್ವಾಮಿ (Sakleshpuraswamy Temple) ಹಾಗೂ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

- Advertisement -

ಬೆಂಗಳೂರಿನಿಂದ ಕುಟುಂಬಸ್ಥರೊಂದಿಗೆ ಧರ್ಮಸ್ಥಳಕ್ಕೆ (Dharmasthala) ತೆರಳುವ ಮಾರ್ಗ ಮಧ್ಯೆ ದೇವಾಲಯಗಳಿಗೆ ಭೇಟಿ ನೀಡಿದ್ದರು. ನೆಲದ ಮೇಲೆ ಕುಳಿತು ಸಂಕಲ್ಪ, ಅರ್ಚನೆ ಮಾಡಿಸಿದರು. ಸುಧಾಮೂರ್ತಿ ಅವರಿಗೆ ಮಹಿಳೆಯರು ಬಾಗಿನ ನೀಡಿದರು. ಪೂಜೆ ಬಳಿಕ ಧರ್ಮಸ್ಥಳಕ್ಕೆ ತೆರಳಿದರು. ಇದನ್ನೂ ಓದಿ: ಮದುವೆಯಲ್ಲಿ ಸಖತ್ ಸ್ಟೆಪ್ ಹಾಕಿದ ಸುಧಾಮೂರ್ತಿ, ಕಿರಣ್ ಮಜುಂದಾರ್ ಷಾ – ವಿಡಿಯೋ ವೈರಲ್

- Advertisement -

- Advertisement -

ಇದೇ ವೇಳೆ ಸುಧಾಮೂರ್ತಿಯವರಿಗೆ ಶಾಸಕ ಸಿಮೆಂಟ್‍ಮಂಜು ಅವರು ಭಗವದ್ಗೀತೆ ನೀಡಿ ಗೌರವಿಸಿದರು. ಬಳಿಕ ಸಿಎಸ್‍ಆರ್ ಫಂಡ್ ಅಥವಾ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಸಕಲೇಶಪುರ ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ: ಮಹಾ ಕುಂಭಮೇಳ ಬಣ್ಣಿಸಿದ ಸಂಸದೆ ಸುಧಾಮೂರ್ತಿ

- Advertisement -

Share This Article