ಡಿವೈಡರ್‌ಗೆ ಡಿಕ್ಕಿ ಹೊಡೆದು ಸೆಲ್ಫ್ ಆಕ್ಸಿಡೆಂಟ್ – ಇಬ್ಬರು ಸ್ಥಳದಲ್ಲೇ ಸಾವು

Public TV
1 Min Read

-ಮೃತ ಓರ್ವನ ಸೊಂಟದಲ್ಲಿ ಚಾಕು ಪತ್ತೆ

ಬೆಂಗಳೂರು: ನಿಯಂತ್ರಣ ತಪ್ಪಿ ಇಬ್ಬರು ಸೆಲ್ಫ್ ಆಕ್ಸಿಡೆಂಟ್ ಮಾಡಿಕೊಂಡ ಘಟನೆ ನಗರದ ಔಟರ್ ರಿಂಗ್ ರೋಡ್‌ನ ದೇವಿನಗರ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೃತ ಯುವಕರ ಗುರುತು ಇನ್ನೂ ಪತ್ತೆಯಾಗಿಲ್ಲ.ಇದನ್ನೂ ಓದಿ: ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು 147 ಮಂದಿ ಸಾವು

ರಾತ್ರಿ 1 ಗಂಟೆ ಸುಮಾರಿಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಬಿಇಎಲ್ ಕಡೆಯಿಂದ ಹೆಬ್ಬಾಳಕ್ಕೆ (Hebbal) ಬರುತ್ತಿದ್ದರು. ಒಬ್ಬ ಸೊಂಟಕ್ಕೆ ಟೂಲ್ಸ್ ಸಿಕ್ಕಿಸಿಕೊಂಡಿದ್ದ. ಔಟರ್ ರಿಂಗ್ ರೋಡ್‌ನ ದೇವಿನಗರ ಬಸ್ ನಿಲ್ದಾಣ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ಸ್ಕೂಟಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಹೆಬ್ಬಾಳ ಪೊಲೀಸರು (Hebbal Police) ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಮೃತ ಓರ್ವನ ಸೊಂಟದಲ್ಲಿ ಚಾಕು ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ (Baptist Hospital) ರವಾನಿಸಲಾಗಿದೆ.

ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಯುವಕರು ಎಂದು ಶಂಕೆ ವ್ಯಕ್ತವಾಗಿದ್ದು, ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ: 17-10-2024

Share This Article