3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕರ್ತವ್ಯಕ್ಕೆ ಅನ್‌ಫಿಟ್‌ – ಟೀಕೆ ಬೆನ್ನಲ್ಲೇ ಮಾರ್ಗಸೂಚಿ ಹಿಂಪಡೆದ SBI

Public TV
1 Min Read

ನವದೆಹಲಿ: ಕರ್ತವ್ಯಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರಿಗೆ ಹೊರಡಿಸಿದ್ದ ಮಾರ್ಗಸೂಚಿಯು ವಿವಾದಕ್ಕೆ ಸಿಲುಕುತ್ತಿದ್ದಂತೆ ಅದನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಿಂತೆಗೆದುಕೊಂಡಿದೆ.

ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಲು ʼತಾತ್ಕಾಲಿಕವಾಗಿ ಅನರ್ಹರುʼ ಎಂದು ಎಸ್‌ಬಿಐ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: Budget Session: ಜ.31, ಫೆ.1ರಂದು ಸಂಸತ್‌ನ ಎರಡೂ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯ ವೇಳೆ ಇರಲ್ಲ

ಮಾರ್ಗಸೂಚಿಯನ್ನು ವಿರೋಧಿಸಿ ದೆಹಲಿ ಮಹಿಳಾ ಆಯೋಗವು (ಡಬ್ಲ್ಯೂಡಿಸಿ), ಎಸ್‌ಬಿಐಗೆ ನೋಟಿಸ್‌ ಜಾರಿ ಮಾಡಿತ್ತು. ದೆಹಲಿ ಮಾರ್ಗಸೂಚಿಯನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ, ಬ್ಯಾಂಕ್‌ನ ಕ್ರಮವು ತಾರತಮ್ಯ ಹಾಗೂ ಕಾನೂನುಬಾಹಿರವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರನ್ನು ಕರ್ತವ್ಯಕ್ಕೆ ಹಾಜರಾಗದಂತೆ ತಡೆಯಲು ಎಸ್‌ಬಿಐ ಮಾರ್ಗಸೂಚಿ ಹೊರಡಿಸಿದೆ. ಅಲ್ಲದೇ ಅವರು ತಾತ್ಕಾಲಿಕವಾಗಿ ಅನರ್ಹರು ಎಂದು ಸಹ ಹೇಳಿದೆ. ಇದು ತಾರತಮ್ಯದಿಂದ ಕೂಡಿದ್ದು, ಕಾನೂನುಬಾಹಿರವಾಗಿದೆ. ಈ ಮಹಿಳಾ ವಿರೋಧಿ ನಿಯಮವನ್ನು ಹಿಂಪಡೆಯುವಂತೆ ಕೋರಿ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಸ್ವಾತಿ ತಿಳಿಸಿದ್ದರು. ಇದನ್ನೂ ಓದಿ: ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುವುದು. ಹೆರಿಗೆ ನಂತರ ನಾಲ್ಕು ತಿಂಗಳೊಳಗೆ ಅವರು ಕರ್ತವ್ಯಕ್ಕೆ ಮರಳಲು ಅನುಮತಿಸಬಹುದು ಎಂದು ಸುತ್ತೋಲೆಯಲ್ಲಿದೆ. ಈ ನಿಯಮಗಳನ್ನು ಬ್ಯಾಂಕ್‌ ರೂಪಿಸಿದೆ ಎಂದು ತೋರುತ್ತದೆ. ಇದು ಗಂಭೀರವಾದ ವಿಷಯ. ಈ ಕ್ರಮ ಬ್ಯಾಂಕ್‌ ಸಾಮಾಜಿಕ ಭದ್ರತೆ ಸಂಹಿತೆ, 2020ರ ಅಡಿ ಒದಗಿಸಲಾದ ಹೆರಿಗೆ ಪ್ರಯೋಜನೆಗಳಿಗೆ ವಿರುದ್ಧವಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿತ್ತು.

ಈ ಮಾರ್ಗಸೂಚಿಗಳನ್ನು ಯಾವ ಮಾನದಂಡಗಳ ಆಧಾರದಲ್ಲಿ ರೂಪಿಸಲಾಯಿತು ಎಂಬುದನ್ನು ವಿವರಿಸಲು ಮತ್ತು ಅವುಗಳನ್ನು ಅನುಮೋದಿಸಿದ ಅಧಿಕಾರಿಗಳ ಹೆಸರನ್ನು ನೀಡುವಂತೆ ಎಸ್‌ಬಿಐಗೆ ಮಹಿಳಾ ಆಯೋಗ ಕೇಳಿತ್ತು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಸಿಂಗ್ ನೆರೆಮನೆಯಾತನ ಬಂಧನ

ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಗರ್ಭಿಣಿಯರಿಗೆ ಹೊರಡಿಸಲಾಗಿದ್ದ ಪರಿಷ್ಕೃತ ಮಾರ್ಗಸೂಚಿಗಳನ್ನು ಹಿಂಪಡೆಯಲಾಗಿದೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *