Breaking- ದುನಿಯಾ ಸೂರಿ ಟೀಮ್ ಜೊತೆ ಸತೀಶ್ ನೀನಾಸಂ ಸಿನಿಮಾ: ಕುತೂಹಲ ಮೂಡಿಸಿದ ಜೋಡಿ

By
1 Min Read

ಸರಾ, ಮ್ಯಾಟ್ನಿ, ಅಶೋಕ ಬ್ಲೇಡ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ಪ್ರತಿಭಾವಂತ ನಟ ಸತೀಶ್ ನೀನಾಸಂ (Satish Ninasam) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಸುದ್ದಿಕೊಟ್ಟಿದ್ದಾರೆ. ಹೆಸರಾಂತ ನಿರ್ದೇಶಕ ದುನಿಯಾ ಸೂರಿ (Duniya Suri) ಟೀಮ್ ಜೊತೆ ಕೆಲಸ ಮಾಡುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಈ ಸಿನಿಮಾವ ಸೂರಿ ಅವರ ಮಾರ್ಗದರ್ಶನದಲ್ಲಿ ನಡೆಯುವುದಾಗಿಯೂ ತಿಳಿಸಿದ್ದಾರೆ.

ಸೂರಿ ನಿರ್ದೇಶನದ ಕೆಲ ಸಿನಿಮಾಗಳಲ್ಲಿ ಸತೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸೋಲೋ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಹಾಗಾಗಿಯೇ ಸತೀಶ್ ಗಾಗಿಯೇ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು ಎನ್ನುವ ಮಾತುಗಳನ್ನು ಈ ಹಿಂದೆ ಸೂರಿ ಆಡಿದ್ದರು. ಆದರೆ, ಈ ಬಾರಿ ತಮ್ಮ ಶಿಷ್ಯ ಸುರೇಶ್ ಎನ್ನುವವರಿಗೆ ಈ ಅವಕಾಶವನ್ನು ಬಿಟ್ಟುಕೊಟ್ಟಿದ್ದಾರೆ ಸೂರಿ. ಹತ್ತಾರು ವರ್ಷಗಳ ಕಾಲ ಸೂರಿಯೊಂದಿಗೆ ಕೆಲಸ ಮಾಡಿರುವ ಸುರೇಶ್ (Suresh) ತಮ್ಮ ಚೊಚ್ಚಲು ನಿರ್ದೇಶನದ ಸಿನಿಮಾಗೆ ಸತೀಶ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಸೂರಿ ಸಿನಿಮಾಗಳೆಂದರೆ, ಅದಕ್ಕೊಂದು ಬ್ರ್ಯಾಂಡ್ ಇದೆ. ಅವರದ್ದೇ ಆದ ಸ್ಟೈಲ್ ಇದೆ. ಶಿಷ್ಯರಿಗೂ ಅದೇ ಹಾದಿಯನ್ನೇ ಕಲಿಸಿ ಕೊಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಸತೀಶ್ ನಟನೆಯ ಹೊಸ ಸಿನಿಮಾ ಕೂಡ ಅದೇ ಮಾದರಿಯಲ್ಲಿ ಇರಲಿದೆ. ಇದೇ ಮೊದಲ ಬಾರಿಗೆ ಅಂತಹ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದಾರೆ. ದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

ಹೊಸ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ಕೊಡದೇ ಇದ್ದರೂ, ಸೂರಿ ಟೀಮ್ ಜೊತೆ ಸಿನಿಮಾ ಮಾಡುತ್ತಿರುವುದನ್ನು ಸತೀಶ್ ಖಚಿತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಸದ್ಯ ಮ್ಯಾಟ್ನಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಅವರು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *