ಕರೂರಿನಲ್ಲಿ ಭೇಟಿಯಾಗದ್ದಕ್ಕೆ ಕ್ಷಮಿಸಿ – ಮೃತರ ಕುಟುಂಬಸ್ಥರನ್ನ ಭೇಟಿಯಾಗಿ 7.8 ಕೋಟಿ ಪರಿಹಾರ ವಿತರಿಸಿದ ವಿಜಯ್

1 Min Read

– ಘಟನೆ ನಡೆದ ಬರೋಬ್ಬರಿ ಒಂದು ತಿಂಗಳಿಗೆ ಭೇಟಿ

ಚೆನ್ನೈ: ಕರೂರಿನಲ್ಲಿ (Karur) ಭೇಟಿಯಾಗದಿರೋದಕ್ಕೆ ಕ್ಷಮಿಸಿ ಎಂದು ನಟ, ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ (TVK Vijay) ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ, 7.8 ಕೋಟಿ ರೂ. ಪರಿಹಾರ ನೀಡಿ, ಸಾಂತ್ವನ ಹೇಳಿದ್ದಾರೆ.

ತಮಿಳುನಾಡಿನಲ್ಲಿ (Tamilnadu) ಕರೂರು ಭೀಕರ ಕಾಲ್ತುಳಿತ ದುರಂತ ಸಂಭವಿಸಿ ಇಂದಿಗೆ 1 ತಿಂಗಳು. ಸೆ.27ರಂದು ಟಿವಿಕೆ ವಿಜಯ್ ಅವರ ರ‍್ಯಾಲಿಯಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದು ಬರೋಬ್ಬರಿ ಒಂದು ತಿಂಗಳಿಗೆ ವಿಜಯ್ ಮೃತರ ಕುಟುಂಬಸ್ಥರನ್ನ ಭೇಟಿ ಮಾಡಿ, ಕರೂರಿನಲ್ಲಿ ಭೇಟಿಯಾಗದಿರೋದಕ್ಕೆ ಕ್ಷಮೆಯಾಚಿಸಿದ್ದಾರೆ.ಇದನ್ನೂ ಓದಿ: ಕಾಲ್ತುಳಿತಕ್ಕೆ 41 ಜನ ಸಾವು ಕೇಸ್‌ – ಅ.27ಕ್ಕೆ ಮೃತರ ಕುಟುಂಬಸ್ಥರ ಭೇಟಿಯಾಗಲಿರೋ ವಿಜಯ್‌

ಮೃತಪಟ್ಟವರ ಕುಟುಂಬಸ್ಥರನ್ನು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ರೆಸಾರ್ಟ್‌ನಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಕರೂರಿನಿಂದ ಒಟ್ಟು 37 ಕುಟುಂಬಗಳನ್ನು ರೆಸಾರ್ಟ್‌ಗೆ ಕರೆತರಲಾಗಿತ್ತು. ಅವರಿಗಾಗಿ ಟಿವಿಕೆ ಪಕ್ಷ, ರೆಸಾರ್ಟ್‌ನ ಸುಮಾರು 50 ಕೊಠಡಿಗಳನ್ನು ಕಾಯ್ದಿರಿಸಿತ್ತು. ಟಿವಿಕೆ ನಾಯಕ ಸಂತ್ರಸ್ತ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿ, ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ.ಯಂತೆ ಒಟ್ಟು 7.8 ಕೋಟಿ ರೂ. ಪರಿಹಾರ ವಿತರಣೆ ಮಾಡಿದ್ದಾರೆ.

ಇನ್ನೂ ಇದೇ ವೇಳೆ ಸಂತ್ರಸ್ತ ಕುಟುಂಬಗಳಿಗೆ ಶಿಕ್ಷಣದ ಜೊತೆಗೆ ಆರ್ಥಿಕ ಸಹಾಯ, ಉದ್ಯೋಗದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ರಾಜಕೀಯ ಸಮಾವೇಶ, ರೋಡ್‌ಶೋ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮ ಆಯೋಜನೆಗೆ 10 ದಿನಗಳ ಒಳಗೆ ಎಸ್‌ಓಪಿ ರಚಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.ಇದನ್ನೂ ಓದಿ:

Share This Article