IPL 2026 | ಭಾರತಕ್ಕೆ ಮರಳಿದ ಕಮ್ಮಿನ್ಸ್ – ಮತ್ತೆ SRH ನಾಯಕತ್ವದಲ್ಲಿ ಬದಲಾವಣೆ

2 Min Read

ಬಾರಿಯ ಐಪಿಎಲ್‌ನಲ್ಲಿ (IPL 2026) ಹೈದರಾಬಾದ್ತಂ (SRH) ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಸತತ ಎರಡು ಸೋಲಿನ ನಂತರ ಹೈದರಾಬಾದ್ ತಂಡವು ಮತ್ತೆ ಚೇತರಿಸಿಕೊಂಡಿದ್ದು, ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ಸೋಲಿಸಿ ಕಮ್​ಬ್ಯಾಕ್ ಮಾಡಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

- Advertisement -

ತಂಡದ ಟಾಪ್ ಬೌಲರ್​ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಫಿಟ್​ನೆಸ್​ ಟೆಸ್ಟ್ ಪಾಸ್ ಆಗಿ ಭಾರತಕ್ಕೆ ಮರಳಿದ್ದಾರೆ. ಇದರಿಂದ ಇಷ್ಟು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಇಶಾನ್ ಕಿಶನ್‌ (Ishan Kishan) ನಾಯಕತ್ವ ಕಳೆದುಕೊಳ್ಳಲಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ಬಸ್ ಹತ್ತಿದ ಧೋನಿ – ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ತಲಾ?

- Advertisement -

ಕಳೆದ ಪಂದ್ಯದಲ್ಲಿ ಇಬ್ಬರು ಅನ್​ಕ್ಯಾಪ್ಡ್ ಬೌಲರ್‌ಗಳು ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ತೋರಿ ಹೈದರಾಬಾದ್‌ಗೆ ಅಚ್ಚರಿ ಜಯ ತಂದುಕೊಟ್ಟಿದ್ದರು. ಇದೀಗ ಬೌಲಿಂಗ್ ಪಡೆಗೆ ಆನೆಬಲ ಹೆಚ್ಚಿಸುವ ಮತ್ತೊಂದು ಬೌಲರ್​ ಆರೆಂಜ್ ಆರ್ಮಿಗೆ ಸೇರಿಕೊಂಡಿದ್ದಾರೆ. ಈ ಮೂರನೇ ಬೌಲರ್ ಬೇರೆ ಯಾರೂ ಅಲ್ಲ, ಪ್ಯಾಟ್ ಕಮ್ಮಿನ್ಸ್. ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಪ್ಯಾಟ್ ಕಮ್ಮಿನ್ಸ್. ಅವರು ಇಂದು ತಂಡದೊಂದಿಗೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

- Advertisement -

ಐಪಿಎಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತೆ ತಂಡಕ್ಕೆ ಮರಳಿರುವುದರಿಂದ ಇಶಾನ್ ಕಿಶನ್ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಪ್ಯಾಟ್ ಕಮ್ಮಿನ್ಸ್ ಹೈದರಾಬಾದ್ ತಂಡವನ್ನು ಕಳೆದ ಎರಡು ಸೀಸನ್​ಗಳಿಂದ ಮುನ್ನಡೆಸುತ್ತಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಮಾತ್ರ ಇಶಾನ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- Advertisement -

ಪ್ಯಾಟ್ ಕಮ್ಮಿನ್ಸ್ ಗುರುವಾರ ರಾತ್ರಿ (ಏಪ್ರಿಲ್ 17) ತಮ್ಮ ಕುಟುಂಬದೊಂದಿಗೆ ಹೈದರಾಬಾದ್‌ಗೆ ಆಗಮಿಸಿದ್ದರು. ಆದರೆ ಏಪ್ರಿಲ್ 25 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ನಿರೀಕ್ಷೆಯಿದೆ. ಪ್ರಸ್ತುತ, SRH ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ಏಪ್ರಿಲ್ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.

ಇಶಾನ್ ಕಿಶನ್ 5 ಪಂದ್ಯಗಲಲ್ಲಿ ತಂಡವನ್ನ ಮುನ್ನಡೆಸಿರುವುದರಿಂದ ಅವರ ತಂತ್ರದಡಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಈಗ ಕೆಲವು ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಬೇಕಾಗುತ್ತದೆ. ಇದನ್ನೂ ಓದಿ: ಫೋನ್ ಬಳಸಿ ಸಿಕ್ಕಿಬಿದ್ದ ಆರ್‌ಆರ್ ವ್ಯವಸ್ಥಾಪಕನಿಗೆ 1 ಲಕ್ಷ ದಂಡ – ಬಿಸಿಸಿಐ ವಾರ್ನಿಂಗ್

Share This Article