ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಾಗರ್, ಸಿರಿ ರಾಜು ದಂಪತಿ

Public TV
1 Min Read

ಕಿರುತೆರೆಯ ಜನಪ್ರಿಯ ‘ಸತ್ಯ’ (Sathya Serial) ಸೀರಿಯಲ್ ಹೀರೋ ಸಾಗರ್- ಸಿರಿ ರಾಜು (Siri Raju) ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸಾಗರ್ ದಂಪತಿ ಸ್ಪೆಷಲ್ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

ನಟಿ ಸಿರಿ ರಾಜು ಅವರು ಮಗುವಿನ ಶೂ ಫೋಟೋ ಶೇರ್ ಮಾಡಿ, ‘ಪವಾಡಗಳಿಗೂ ಸಮಯ ಹಿಡಿಯುತ್ತದೆ’ ಎಂದು ಗುಡ್ ನ್ಯೂಸ್ ತಿಳಿಸಿದ್ದರು. ಇದೀಗ ‘ಸತ್ಯ’ ಹೀರೋ ಸಾಗರ್ (Sagar Biligowda) ಪತ್ನಿ ಸಿರಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಕಂದು ಬಣ್ಣದ ಟಾಪ್ ಧರಿಸಿ ಸಿರಿ ಬೇಬಿ ಬಂಪ್ ಲುಕ್ ತೋರಿಸಿದ್ದಾರೆ. ಪತ್ನಿ ಸಿರಿ ಜೊತೆ ಸಾಗರ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಾಗರ್‌ ದಂಪತಿಗೆ ಆಪ್ತರು, ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ ಸುಂದರಿ

ಕಳೆದ ವರ್ಷ ಜ.26ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಸಾಗರ್- ಸಿರಿ ರಾಜು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಕಿರುತೆರೆಯ ನಟ-ನಟಿಯರು ಸಾಗರ್- ಸಿರಿ ಮದುವೆಯಲ್ಲಿ ಭಾಗಿಯಾಗಿದ್ದರು.

Share This Article