ಮಗುವಿನೊಂದಿಗೆ ಮನೆಗೆ ಮರಳಿದ ಸಂಜನಾ: ಮಗು ಹೆಸರಿನ ಬಗ್ಗೆ ಭಾರೀ ಚರ್ಚೆ

Public TV
1 Min Read

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾದ ಸಂಜನಾ, ಮಗುವಿನೊಂದಿಗೆ ಮನೆಗೆ ಬಂದಿರುವ ಕುರಿತು ವಿಡಿಯೋವೊಂದು ಹಂಚಿಕೊಂಡು ಭಾವುಕರಾಗಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾದ ಸಂತಸದಲ್ಲಿರುವ ಸಂಜನಾ ಗಲ್ರಾನಿ, ಇದೀಗ ಮರಳಿ ಗೂಡಿಗೆ ಮಗುವಿನೊಂದಿಗೆ ಮರಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನನ್ನ ಬದುಕು ಸಂಪೂರ್ಣವಾಗಿ ಬದಲಾಗಿದೆ ಎಂದು ಮಗುವಿನ ಜೊತೆಯಿರುವ ವಿಡಿಯೋವೊಂದನ್ನ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿರುವ ಸಂಜನಾ, ನನ್ನ ಪುಟ್ಟ ಗೂಡಿಗೆ ನನ್ನ ಮಗು, ನನ್ನ ಜೀವನದಲ್ಲಿ ಸೃಷ್ಟಿಸಿದ ಸುಂದರ ಶಕ್ತಿ ಈ ಪುಟ್ಟ ಕಂದಮ್ಮಗೆ ಸ್ವಾಗತ, ಈ ನಾಲ್ಕು ದಿನಗಳಲ್ಲಿ ನನ್ನ ಜೀವನ ಸಂಪೂರ್ಣ ಬದಲಾಗಿದೆ. ಮಾತೃತ್ವ ಮತ್ತು ರಕ್ಷಣೆಯ ಕಡೆಗೆ ಎಂದು ಸಂಜನಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಹಾಟ್‌ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ `ಅರ್ಜುನ್ ರೆಡ್ಡಿ’ ಚೆಲುವೆ

ಇನ್ನು ಈ ವೇಳೆ ತಾಯಿ ಮತ್ತು ಮಗುವಿಗೆ ದೃಷ್ಟಿ ತೆಗೆದು ಮನೆಗೆ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಆಚರಿಸಿದ್ದ ಸಂಜನಾ, ಮಗುವಿಗೆ ಯಾವ ಸಂಪ್ರದಾಯದ ಹೆಸರನ್ನ ಇಡಬಹುದು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.

Share This Article