ಸಿಸಿಬಿಯಿಂದ ನನಗೆ ನ್ಯಾಯ ಸಿಕ್ಕಿದೆ: ಕಾರುಣ್ಯ ರಾಮ್‌

1 Min Read

ಟಿ ಕಾರುಣ್ಯ ರಾಮ್‌ (Karunya Ram) ಸಿಸಿಬಿ (CCB) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕರೆ ಮಾಡಿ, ಬ್ಯಾಡ್ ಕಾಮೆಂಟ್ಸ್ ಮಾಡಿದ್ದ 5 ಜನ ಅನಾಮದೇಯರ ವಿರುದ್ಧ ಮಾತ್ರ ದೂರು ಕೊಟ್ಟಿದ್ದೆ. ಇವತ್ತು‌ ನನ್ನನ್ನು ಹಾಗೂ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅವರೆಲ್ಲ ನನ್ನ ಮುಂದೆ ಒಪ್ಪಿಕೊಂಡು ಯಾವುದೋ ಭರದಲ್ಲಿ ಆ ರೀತಿ ಮಾತಾಡಿದ್ದೀವಿ ಎಂದಿದ್ದಾರೆ.

ಅಪಾಲಜಿ ಕೂಡ ಬರೆಸಿಕೊಂಡಿದ್ದಾರೆ. ಈ ಕೇಸ್ ಬಗ್ಗೆ ನಾನು‌ ಎಲ್ಲೂ ಮಾತಾನಾಡುವಂತಿಲ್ಲ ನನಗೆ ಕೆಲ ಪ್ರೋಟೋಕಾಲ್ ಇದೆ. ತಪ್ಪು ಪ್ರತಿಯೊಬ್ಬರು ಮಾಡ್ತಾರೆ. ಆದ್ರೆ ಅದನ್ನ ತಿದ್ದಿ ನಡೆಯೋದು‌ ಮನುಷ್ಯ ಗುಣ.ನನ್ನ ಜೀವನದಲ್ಲಿ ನಾನು ಯಾವುದೇ ಊಹಾಪೋಹಗಳಿಗೆ ಕಿವಿ‌ ಕೊಟ್ಟಿಲ್ಲ. ನಾನು ಯಾವುದೇ ರೀತಿ‌ ತಪ್ಪು ಮಾಡಿಲ್ಲ. ಯಾರಿಗೂ ಕೂಡ ಉತ್ತರ ಕೊಡುವ ಉದ್ದೇಶ ಇಲ್ಲ ನಾನು‌ ಕಾನೂನು‌ ಮೊರೆ ಹೋಗಿದ್ದೆ. ಸಿಸಿಬಿ ಪೊಲೀಸರು ನನಗೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: 25 ಲಕ್ಷ ವಂಚನೆ – ತಂಗಿ ವಿರುದ್ಧವೇ ನಟಿ ಕಾರುಣ್ಯಾ ರಾಮ್‌ ದೂರು

ಇರೋದು ಒಂದೇ ಜೀವನ, ಹೆಸರು ಮಾಡೋದು ಕಷ್ಟ, ಅದನ್ನ ಉಳಿಸಿಕೊಳ್ಳೋದು ಕಷ್ಟ. ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಬಾರದು. ನಾವು ಒಂದು ಮಾಡಿದ್ರೆ ಅದು ನೂರು ಪಟ್ಟಾಗಿ ವಾಪಸ್‌ ಬರುತ್ತೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ, ಸತ್ಯಮೇವ ಜಯತೆ ಎಂದಿದ್ದಾರೆ. ಇದನ್ನೂ ಓದಿ: ಗ್ಯಾಮ್ಲಿಂಗ್‌ನಲ್ಲಿ ಹಣ ಕಳೆದುಕೊಂಡೆ, 3 ವರ್ಷಗಳಿಂದ ಮನೆಯಿಂದಾಚೆಯಿದ್ದೀನಿ, ಇವರಿಂದ ಬದುಕೋಕೆ ಆಗ್ತಿಲ್ಲ: ಸಮೃದ್ಧಿ ರಾಮ್‌ ಕಣ್ಣೀರು

Share This Article