ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಆನೆ, ನಾಯಿ ಎಂದು ನೀತಿ ಪಾಠ ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ರಾಜಮಾರ್ಗ, ಗಲ್ಲಿಯಲ್ಲಿ ಆನೆ ನಡೆಯುವಾಗ ನಾಯಿ ಬೊಗಳುವುದು ಸಹಜ ಎಂದು ಹೇಳಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?:
ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯೆರ್ಥ ತೋರಿಕೆ ಏಕೆಬೇಕು. ಆನೆ ರಾಜಮಾರ್ಗದಲ್ಲಿ ಆಗಲಿ, ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜವಾಗಿದೆ. ನಮ್ಮಗುಣ ಆನೆಯಂತೆ ಇದ್ದಾಗ, ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್
ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯೆರ್ಥ ತೋರಿಕೆ ಏಕೆಬೇಕು!
ಆನೆ ರಾಜಮಾರ್ಗದಲ್ಲಿ ಆಗಲಿ
ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ!
ನಮ್ಮಗುಣ ಆನೆಯಂತೆ ಇದ್ದಾಗ
ಬೊಗಳುವ ನಾಯಿಗಳ ಸಮಕ್ಕೆ
ನಾವು ಇಳಿಯಬಾರದು!
ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ!
ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ! pic.twitter.com/xbYsrp0dhv— ನವರಸನಾಯಕ ಜಗ್ಗೇಶ್ (@Jaggesh2) August 25, 2021
ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಅವರ ವಿಚಾರಧಾರೆಗಳನ್ನು ಅಭಿಮಾನಿಗಳಿಗೆ ತಿಳಿಸಲು ಟ್ವೀಟ್ ಮಾಡುತ್ತಿರುತ್ತಾರೆ. ಆದರೆ ಇದೀಗ ಮಾಡಿರುವ ಟ್ವೀಟ್ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡಿದೆ. ಯಾಕಂದರೆ ಜಗ್ಗೇಶ್ ಸಹೋದರ ಕೋಮಲ್ ಅವರ ಹೆಸರು 1.72 ಕೋಟಿ ರೂ. ಸ್ವೆಟರ್ ಹಗರಣದಲ್ಲಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಜಗ್ಗೇಶ್ ವಿರುದ್ಧ ಕೇಳಿಬಂದಿದೆ.