ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ ಎಸ್.ಟಿ. ಸೋಮಶೇಖರ್

Public TV
1 Min Read

ಬೆಂಗಳೂರು: ಬಿಜೆಪಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಎಸ್.ಟಿ. ಸೋಮಶೇಖರ್ ಅವರು ಸದಾಶಿವನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸ, ಬಿಟಿಎಂ ಲೇಔಟ್‍ನಲ್ಲಿರುವ ಸ್ವಂತ ನಿವಾಸಗಳಿಗೆ ಬರದೇ ಅಜ್ಞಾತ ಸ್ಥಳದಲ್ಲಿದ್ದಾರೆ. ಪುತ್ರ ನಿಶಾಂತ್ ಬ್ಲಾಕ್ ಮೇಲ್ ಪ್ರಕರಣ ಬಯಲಾದಾಗಿನಿಂದಲೂ ಸೋಮಶೇಖರ್ ಅವರು ಹೊರಗೆ ಬಂದಿಲ್ಲ. ಅಲ್ಲದೇ ತಮ್ಮನ್ನು ಭೇಟಿಯಾಗಲು ಬರುವವರಿಗೆ ಭೇಟಿ ಮಾಡಲ್ಲ ಎಂದು ಹೇಳುತ್ತಿದ್ದಾರೆ ಹಾಗೂ ಎಲ್ಲರ ಜೊತೆಯೂ ಮೊಬೈಲ್ ಫೋನಿನಲ್ಲಿಯೇ ಸಂಪರ್ಕದಲ್ಲಿರುವ ಸೋಮಶೇಖರ್ ಅವರು ಇನ್ನೂ ಒಂದೆರಡು ದಿನ ಯಾರನ್ನೂ ಭೇಟಿ ಮಾಡದಿರಲು ನಿರ್ಧಾರಿಸಿದ್ದಾರೆ. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್

ಸೋಮವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ಬೆನ್ನೆಲೆ ಇಂದು ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೂ ಕೋವಿಡ್-19 ದೃಢಪಟ್ಟಿದೆ. ಸದ್ಯ ಈ ಕುರಿತಂತೆ ಭರತ್ ಟ್ವೀಟ್ ಮಾಡಿದ್ದು, ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೇವಲ ಸೂಕ್ಷ್ಮ ಲಕ್ಷಣಗಳನ್ನು ಹೊಂದಿದ್ದೇನೆ. ಇದೀಗ ಮನೆಯಲ್ಲಿಯೇ ಐಸೋಲೇಷನಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿ ಅಂದರ್

ಇತ್ತೀಚೆಗಷ್ಟೇ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ನಕಲಿ ಅಶ್ಲೀಲ ವೀಡಿಯೋ ಕಳುಹಿಸಿ ಕಿಡಿಗೇಡಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಕುರಿತಂತೆ ನಿಶಾಂತ್ ಅವರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದರು. ಸದ್ಯ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದವರ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *