ಎಸ್ಕಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾಳೆಂದು ಶಂಕೆ; ರಷ್ಯಾದಿಂದ ದುಬೈಗೆ ಬಂದು ಮಾಜಿ ಪತ್ನಿ ಬರ್ಬರ ಹತ್ಯೆ

1 Min Read

ಮಾಸ್ಕೋ: ಎಸ್ಕಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾಳೆಂದು ಶಂಕಿಸಿ ರಷ್ಯಾದ ವ್ಯಕ್ತಿಯೊಬ್ಬ (Russian Man) ತನ್ನ ಮಾಜಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ದುಬೈನ ವೊಕೊ ಬೊನಿಂಗ್ಟನ್ ಹೋಟೆಲ್‌ನಲ್ಲಿ ಅನಸ್ತಾಸಿಯಾ (25) ಹತ್ಯೆಯಾದ ಮಹಿಳೆ. ಕುತ್ತಿಗೆ, ತಲೆ ಮತ್ತು ಕೈಕಾಲುಗಳಿಗೆ 15 ಬಾರಿ ಇರಿದು ಮಾಜಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – `Call Of Duty’ ಗೇಮ್ ತಯಾರಕ ವಿನ್ಸ್ ಜಾಂಪೆಲ್ಲಾ ನಿಧನ

ಆರೋಪಿ ಆಲ್ಬರ್ಟ್ ಮಾರ್ಗನ್ (41) ಕೊಲೆ ಆರೋಪಿ. ಕಾನೂನು ಸಲಹೆಗಾರನಾದ ಮಾರ್ಗನ್, ರಷ್ಯಾದ ವಿಮಾನಯಾನ ಸಂಸ್ಥೆ ಪೊಬೆಡಾದಲ್ಲಿ ಕೆಲಸ ಮಾಡುತ್ತಿದ್ದ ಅನಸ್ತಾಸಿಯಾಳನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ.

ನಂತರ ಆಕೆಯಿಂದ ಬೇರ್ಪಟ್ಟಿದ್ದ. ಮಾರ್ಗನ್ ತನ್ನ ಮಾಜಿ ಪತ್ನಿಯ ಖಾಸಗಿ ಸಂದೇಶಗಳನ್ನು ಪರಿಶೀಲಿಸಿದ್ದ. ವಿಮಾನ ಸಿಬ್ಬಂದಿಯಾಗಿದ್ದ ಆಕೆ ಎಸ್ಕಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾಳೆಂದು ತಿಳಿದು, ರಷ್ಯಾದಿಂದ ಯುಎಇಗೆ ಸುಮಾರು 2,700 ಮೈಲುಗಳಷ್ಟು ಪ್ರಯಾಣ ಬೆಳೆಸಿದ್ದ. ಹೋಟೆಲ್‌ಗೆ ಬಂದು ಮಾಜಿ ಪತ್ನಿಗೆ ಇರಿದು ಹತ್ಯೆ ಮಾಡಿದ್ದಾನೆ.

ಮಾರ್ಗನ್ ಈ ಹಿಂದೆ ಮಾದಕವಸ್ತು ಸೇವನೆ ಆರೋಪದ ಮೇಲೆ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ. ಮಾಜಿ ಪತ್ನಿ ಜೊತೆ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಮಾರ್ಗನ್‌ ವಿರುದ್ಧದ ಎಲ್ಲಾ ದೂರುಗಳನ್ನು ಹಿಂಪಡೆಯಲು ಅನಸ್ತಾಸಿಯಾ ನಿರ್ಧರಿಸಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ವೇಳೆ ದೇವರ ದಯೆಯಿಂದ ಬದುಕುಳಿದಿದ್ದೇವೆ: ಮುನೀರ್‌

ಕೊಲೆ ಮಾಡಿ ಮಾರ್ಗನ್ ರಷ್ಯಾಕ್ಕೆ ಹಿಂದಿರುಗಿದಾಗ, ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಹೋರಾಡಲು ಕಳುಹಿಸುವಂತೆ ಕೇಳಿಕೊಂಡಿದ್ದ. ರಷ್ಯಾದಲ್ಲಿ ಅಪರಾಧಗಳ ಆರೋಪ ಹೊತ್ತಿರುವ ಕೆಲವರು ಮಿಲಿಟರಿಗೆ ಸೇರಲು ಪ್ರಯತ್ನಿಸಿದ್ದಾರೆ. ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಉಕ್ರೇನ್‌ ಮೇಲೆ ಯುದ್ಧಕ್ಕೆ ಹೋಗುತ್ತಿದ್ದಾರೆ. ಆದರೆ, ಮಾರ್ಗನ್‌ ಪ್ಲ್ಯಾನ್‌ ವಿಫಲವಾಯಿತು. ರಷ್ಯಾದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Share This Article