ಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ RSS ಮುಖ್ಯಸ್ಥ ಮೋಹನ್ ಭಾಗವತ್

Public TV
2 Min Read

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆರ್‌ಎಸ್‍ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ದೆಹಲಿ ಮಸೀದಿಯಲ್ಲಿ (Mosque) ಮುಸ್ಲಿಂ ಮುಖಂಡರು ಹಾಗೂ ಧರ್ಮಗುರುಗಳೊಂದಿಗೆ ಸಭೆ ನಡೆಸಿದರು.

ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಧರ್ಮಗುರು ಉಮರ್ ಅಹ್ಮದ್ ಇಲ್ಯಾಸಿ ಅವರ ಜೊತೆಗೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಗೌಪ್ಯ ಸಭೆ ನಡೆಸಿದರು. ಈ ಬಗ್ಗೆ ಧರ್ಮಗುರುಗಳ ಮಗ ಸುಹೈಬ್ ಇಲ್ಯಾಸಿ ಮಾತನಾಡಿ, ಇದು ದೇಶಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತದೆ. ನಾವು ಕುಟುಂಬದಂತೆ ಚರ್ಚೆ ನಡೆಸಿದ್ದೇವೆ. ಅವರು ನಮ್ಮ ಆಹ್ವಾನದ ಮೇರೆಗೆ ಬಂದಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಹಿಜಬ್ (Hijab) ವಿವಾದದ ಬಳಿಕ ಈ ಸಭೆಯು ಹೆಚ್ಚು ಮಹತ್ವವನ್ನು ಪಡೆದಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ದೇಗುಲದಲ್ಲಿ ಹಿಂದೂ ಪ್ರಾರ್ಥನೆಯನ್ನು ಕೋರಿದ ಮನವಿಯ ಬೆನ್ನಲ್ಲೇ ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ.

75 ನಿಮಿಷಗಳ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಮಾತನಾಡಿ, ದೇಶದ ಪರಿಸ್ಥಿತಿಯ ಬಗ್ಗೆ ಆತಂಕವಿದೆ. ಅಸಮಾಧಾನದ ವಾತಾವರಣದಿಂದ ನನಗೆ ಸಂತೋಷವಿಲ್ಲ. ಇದು ಸಂಪೂರ್ಣವಾಗಿ ತಪ್ಪು. ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರ ದೇಶವು ಮುನ್ನಡೆಯಲು ಸಾಧ್ಯ ಎಂದು ಅವರು ಆರ್‌ಎಸ್‍ಎಸ್ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಮೋಹನ್ ಭಾಗವತ್ ಅವರು ಗೋಹತ್ಯೆಯಂತಹ ವಿಷಯಗಳನ್ನು ಚರ್ಚಿಸಿದ್ದಾರೆ. ಇದು ಹಿಂದೂಗಳನ್ನು ಅಸಮಾಧಾನಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ನಾವು ಪ್ರತಿಕ್ರಿಯಿಸಿ, ಇದನ್ನು ದೇಶಾದ್ಯಂತ ಗೋಹತ್ಯೆಯನ್ನು ಪ್ರಾಯೋಗಿಕವಾಗಿ ನಿಷೇಧಿಸಿದ್ದೇವೆ. ಮುಸ್ಲಿಮರು ಕಾನೂನು ಪಾಲಕರು ಮತ್ತು ಯಾರಾದರೂ ಅದನ್ನು ಉಲ್ಲಂಘಿಸಿದರೆ, ಅದು ದೊಡ್ಡ ತಪ್ಪು ಮತ್ತು ಶಿಕ್ಷೆಯಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ಎಸ್‌ಡಿಪಿಐ ಮೂಲಕ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭ ಪಡೆಯುತ್ತಿದೆ: ಮುತಾಲಿಕ್

ಮುಸ್ಲಿಮರ ನಿಷ್ಠೆಯ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲದೇ ಪ್ರತಿ ಹೆಜ್ಜೆಯಲ್ಲೂ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಬೇಕೆಂದು ಬಯಸುತ್ತಾರೆ ಎಂದಿದ್ದಕ್ಕೆ ಮುಸ್ಲಿಮರು ಸಹ ಭಾರತೀಯರು ಎಂದು ಒಪ್ಪಿಕೊಂಡಿದ್ದಾರೆ. ನಮ್ಮೆಲ್ಲರ ಡಿಎನ್‍ಎ ಒಂದೇ. ಆದರೆ ಇಲ್ಲಿನ ಬಹುಪಾಲು ಮುಸ್ಲಿಮರು ಮತಾಂತರಗೊಂಡಿದ್ದಾರೆ ಎಂದು ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದರು.

ಅಷ್ಟೇ ಅಲ್ಲದೇ ನಮಗೆ ಸಾಕಷ್ಟು ಭರವಸೆಯನ್ನು ಮೋಹನ್ ಭಾಗವತ್ ಅವರು ನೀಡಿದ್ದಾರೆ. ಶಿವಲಿಂಗದ ಬಗ್ಗೆ ಅವರ ಹೇಳಿಕೆಯು ತುಂಬಾ ಪ್ರಬಲವಾಗಿದ್ದು, ಈ ಹಿನ್ನೆಲೆಯಲ್ಲಿ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಭೇಷರತ್ ಕ್ಷಮೆ ಕೋರಬೇಕು: ಪಿ.ರಾಜೀವ್ ಆಗ್ರಹ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *