ಬೆಂಗಳೂರು: ಇರಾನ್ – ಇಸ್ರೇಲ್ ಯುದ್ಧದ (Iran-Israel war) ಪರಿಣಾಮದಿಂದ ನಗರದಲ್ಲಿ (Bengaluru) ಅಡುಗೆ ಅನಿಲದ ಅಭಾವ ಉಂಟಾಗಿದೆ. ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದ್ದು, ಹೋಟೆಲ್ ಒಂದರಲ್ಲಿ ಬ್ರೇಕ್‌ಫಾಸ್ಟ್ ಮಾಡಿದವರಿಗೆ ಗ್ಯಾಸ್ ಸಪ್ಲೈ ಚಾರ್ಜ್ (Gas Charge) ಕೂಡ ಸೇರಿಸಿ ಬಿಲ್ (Hotel Bill) ನೀಡಲಾಗಿದೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಪಿಜಿಯಲ್ಲಿ ತಿಂಡಿ ಸಿಗದ ಕಾರಣ ಗ್ರಾಹಕರೊಬ್ಬರು Mr. ಆಂಧ್ರ ಮೀಲ್ಸ್ ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ಬ್ರೇಕ್‌ಫಾಸ್ಟ್ ತೆಗೆದುಕೊಂಡ ಬಳಿಕ ಅದರಲ್ಲಿ ಗ್ಯಾಸ್ ಸಪ್ಲೈ ಚಾರ್ಜ್ ಹೆಚ್ಚುವರಿಯಾಗಿ ಸೇರಿದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಬಿಲ್‌ನ್ನು ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಲ್ಲಿ ಕಾಳಗ ಎಫೆಕ್ಟ್ – ರಾಜ್ಯದ ವಿವಿಧೆಡೆ LPG ವ್ಯತ್ಯಯ, ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ
ವೈರಲ್ ಆಗುತ್ತಿರುವ ಬಿಲ್‌ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಇದೊಂದು ದೊಡ್ಡ ಸ್ಕ್ಯಾಮ್, ಸಾರ್ವಜನಿಕರನ್ನು ಲೂಟಿ ಮಾಡುವ ಕೆಲಸ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಲ್ಯಾಣ ಮಂಟಪಗಳಿಗೆ ಗ್ಯಾಸ್ ಟ್ರಬಲ್ – ಮದ್ವೆ ಮನೆಯವ್ರೇ ತರಬೇಕು ಸಿಲಿಂಡರ್!

