ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ – ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ

Public TV
2 Min Read

ಬೆಂಗಳೂರು: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ. ನೀವು ದೊಡ್ಡವರು, ಮಂತ್ರಿಯಾಗಿದ್ದವರು. ಶಾಸಕರಾಗಿ ಬಹಳ ವರ್ಷ ಕೆಲಸ ಮಾಡಿದವರು. ಇಂತಹ ದುಃಖದ ಮನೆಗಳಿಗೆ ಹೋಗಿ ಸಾಕಷ್ಟು ಬಾರಿ ಸಾಂತ್ವನ ಹೇಳಿದ್ದೀರಿ. ಭಾವೋದ್ವೇಗ ಬೇಡ ಎಂದು ಚಂದ್ರು ಅನುಮಾನಾಸ್ಪದ ಸಾವು ಪ್ರಕರಣ (Chandru Case)  ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಹೇಳಿಕೆಗೆ ಆರಗ ಜ್ಞಾನೇಂದ್ರ (Araga Jnanendra)  ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಗ ತೀರಿಕೊಂಡಾಗ ಸಹಜವಾಗಿಯೇ ಭಾವಕರಾಗಿದ್ದಾರೆ. ನಾನು ಅವರ ಮನೆಗೆ ಭೇಟಿ ಕೊಟ್ಟಿದ್ದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಬರಬೇಕು. ತನಿಖೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಆಗುತ್ತದೆ. ರಿಪೋರ್ಟ್ ಬಂದ ಮೇಲೆ ಎಲ್ಲಾ ತಿಳಿಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

ರೇಣುಕಾಚಾರ್ಯ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಆ ರೀತಿ ಭಾವೋದ್ವೇಗಕ್ಕೆ ಒಳಗಾಗೋದು ಸಹಜ. ಹಾಗಂತ ಏನೇನೋ ಆಗೋದು ಬೇಡ. ಪೊಲೀಸ್ ತನಿಖೆ ಸರಿಯಾಗಿಯೇ ನಡೀತಿದೆ. ನಾನೂ ಕೂಡಾ ರೇಣುಕಾಚಾರ್ಯ ಜೊತೆ ಮಾತನಾಡುದ್ದೇನೆ. ಈ ಪ್ರಕರಣಕ್ಕೆ ಸರ್ಕಾರ ಬಹಳ ಮಹತ್ವ ಕೊಟ್ಟಿದೆ. ಎಡಿಜಿಪಿ (ADGP) ಸ್ಥಳಕ್ಕೆ ಹೋಗಿದ್ದರು. ಯಾವುದನ್ನೂ ಅವಗಣನೆ ಮಾಡಿಲ್ಲ. ರೇಣುಕಾಚಾರ್ಯ ಜಾಗದಲ್ಲಿ ಯಾರೇ ಇದ್ರೂ ಭಾವೋದ್ವೇಗಕ್ಕೆ ಹೋಗ್ತಾರೆ. ತನಿಖೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

ಪೊಲೀಸರು ಯಾವುದನ್ನೂ ಮುಚ್ಚಿಡ್ತಿಲ್ಲ. ಮುಚ್ಚಿಡೋದ್ರಿಂದ ಯಾರಿಗೇನು ಪ್ರಯೋಜನ ಇದೆ ಹೇಳಿ? ಯಡಿಯೂರಪ್ಪನವರೂ ಭೇಟಿ ಕೊಟ್ಟಿದ್ದರು. ಸಿಎಂ ಸಹ ಅವರ ಮನೆಗೆ ಭೇಟಿ ಕೊಡಬಹುದು. ತನಿಖೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

ಬಂಡೆ ಮಠದ ಸ್ವಾಮೀಜಿ (Bande Mutt Swamiji)  ಆತ್ಮಹತ್ಯೆ ಕೇಸ್ ವಿಚಾರವಾಗಿ ಮಾತನಾಡಿ, ಡೆತ್‍ನೋಟ್‍ನಲ್ಲಿ ಪ್ರಭಾವಿಗಳ ಹೆಸರು ಉಲ್ಲೇಖ ಹಿನ್ನೆಲೆ. ಪ್ರಕರಣದಲ್ಲಿ ಎಲ್ಲಾ ರೀತಿಯಿಂದಲೂ ಆಳವಾದ ತನಿಖೆ ನಡೀತಿದೆ. ತನಿಖೆಯಿಂದ ಎಲ್ಲವೂ ಹೊರಗೆ ಬರುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *