ಆರ್‌ಸಿಬಿ ತಂಡವನ್ನು ಮಾರಾಟ ಮಾಡುತ್ತಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

Public TV
1 Min Read

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಡಿಯಾಜಿಯೊ ಮಾರಾಟ ಮಾಡುತ್ತಿಲ್ಲ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ತಿಳಿಸಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ (Chinnaswamy Stampede Case) ಬಳಿಕ ಆರ್‌ಸಿಬಿ ಷೇರನ್ನು ಡಿಯಾಜಿಯೊ  ಮಾರಾಟ ಮಾಡಲಿದೆ ಎಂಬ ವದಂತಿ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಇಂದು ಬಾಂಬೆ ಸ್ಟಾಕ್‌ ಎಕ್ಸ್‌ಚೆಂಜ್‌ (BSE) ಈಮೇಲ್‌ ಮೂಲಕ ಸ್ಪಷ್ಟನೆ ಕೇಳಿತ್ತು.

ಈ ಪ್ರಶ್ನೆಗೆ ಉತ್ತರ ನೀಡಿದ ಯುನೈಟೆಡ್ ಸ್ಪಿರಿಟ್ಸ್, ಆರ್‌ಸಿಬಿಯ ಸಂಭಾವ್ಯ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳ ಊಹಾತ್ಮಕ ಸ್ವರೂಪದ್ದಾಗಿವೆ. ಅಂತಹ ಯಾವುದೇ ಚರ್ಚೆಗಳನ್ನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್ ಆಗುತ್ತಾ?

ಡಿಯಾಜಿಯೊ ತೆಕ್ಕೆಗೆ ಆರ್‌ಸಿಬಿ ಹೋಗಿದ್ದು ಹೇಗೆ?
ಐಪಿಎಲ್‌ ಆರಂಭಗೊಳ್ಳುವ ವೇಳೆ ವಿಜಯ್‌ ಮಲ್ಯ ಅವರು ಆರ್‌ಸಿಬಿ ತಂಡವನ್ನು ಖರೀದಿಸಿದ್ದರು. 2012ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕಾರ್ಯಾಚರಣೆ ನಿಲ್ಲಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್‌ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇದ್ದ ಕಾರಣ ಅದರ ಮಾಲೀಕತ್ವ ಈಗ ಡಿಯಾಜಿಯೊಗೆ (Diageo) ಹೋಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

Share This Article